Header Ads
Header Ads
Breaking News

ಭುವನೇಶ್ವರದಲ್ಲಿ ಏಶಿಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್, ಆರು ಚಿನ್ನ ಸೇರಿ ಹದಿನಾಲ್ಕು ಪದಕ ಪಡೆದಿರುವ ಭಾರತ

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ಅಥ್ಲೀಟ್ಗಳ ಪ್ರಾಬಲ್ಯ ಮುಂದುವರಿದಿದೆ. ಎರಡನೇ ದಿನವಾದ ಶುಕ್ರವಾರ ಆತಿಥೇಯರ ಖಾತೆಗೆ ನಾಲ್ಕು ಚಿನ್ನ ಸೇರ್ಪಡೆಯಾಗಿದೆ.
ಮಹಿಳೆಯರ ಮತ್ತು ಪುರುಷರ ೪೦೦ ಮೀಟರ್ಸ್ ಓಟದ ಸ್ಪರ್ಧೆಗಳಲ್ಲಿ ಕ್ರಮವಾಗಿ ನಿರ್ಮಲಾ ಶೆರಾನ್ ಮತ್ತು ಮಹಮ್ಮದ್ ಅನಾಸ್ ಅವರು ಮೊದಲ ಸ್ಥಾನ ಗಳಿಸಿದ್ದಾರೆ. ೧,೫೦೦ ಮೀಟರ್ಸ್ ಓಟದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಅಜಯ್ಕುಮಾರ್ ಸರೋಜ್ ಮತ್ತು ಮಹಿಳೆಯರ ವಿಭಾಗದಲ್ಲಿ ಕೇರಳದ ಪಿ. ಯು. ಚಿತ್ರಾ ಅವರಿಂದ ಚಿನ್ನದ ಸಾಧನೆ ಮೂಡಿಬಂದಿದೆ.
ಭಾರತದ ಜಿಸ್ನಾ ಮ್ಯಾಥ್ಯೂ ಅವರು ಕಂಚು ತಮ್ಮದಾಗಿಸಿಕೊಂಡರು. ಪುರುಷರ ೪೦೦ ಮೀಟರ್ಸ್ ಓಟದಲ್ಲಿ ರಾಜೀವ್ ಅರೋಕಿಯಾ ಈ ವಿಭಾಗದ ಬೆಳ್ಳಿಗೆ ಕೊರಳೊಡ್ಡಿದರು. ಮಹಿಳೆಯರ ೧೦೦ ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದ್ಯುತಿ ಚಾಂದ್ ಅವರು ಕಂಚಿಗೆ ತೃಪ್ತಿಪಟ್ಟರು. ಒಟ್ಟು ೧೪ ಪದಕಗಳನ್ನು ಗೆದ್ದಿರುವ ಭಾರತ ತಂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ. ಆತಿ ಥೇಯರ ಖಾತೆಯಲ್ಲಿ ಆರು ಚಿನ್ನ, ಎರಡು ಬೆಳ್ಳಿ ಮತ್ತು ಆರು ಕಂಚಿನ ಪದಕಗಳಿವೆ.

Related posts

Leave a Reply