Header Ads
Header Ads
Breaking News

ಭೂಕುಸಿತ, ಪ್ರವಾಹದಿಂದ ನರಕವಾದ ಭೂಸ್ವರ್ಗ. ಮುಳುಗಿದ ಮನೆ ಬದುಕು, ಉಳಿದಿದ್ದು ಜೀವ ಮಾತ್ರ.

ಗುಡ್ಡದ ಮೇಲಿದ್ದ ಮನೆಗಳು ಜಲಪ್ರಳಯಕ್ಕೆ ಬೆಟ್ಟ ಸಹಿತ ಕುಸಿಯುತ್ತಿದೆ. ಮನೆಗಳು ತೋಟಗಳು ಕೊಚ್ಚಿ ಹೋಗುತ್ತಿದೆ. ವಿದ್ಯುತ್ ಸಂಪರ್ಕ ಇಲ್ಲ. ಕುಡಿಯಲು ನೀರು ಇಲ್ಲ. ಜೀವನದ ಕೊಂಡಿಯಾಗಿದ್ದ ರಸ್ತೆ ಸಂಪರ್ಕ ಬಹುತೇಕ ಕಳೆದುಹೋಗಿದೆ. ಸ್ಥಿರ ಮತ್ತು ಮೊಬೈಲ್ ಸಂಪರ್ಕ ಸ್ತಬ್ದ. ಮುಂದುವರಿಯುತ್ತಿರುವ ಮಳೆ ಅಬ್ಬರ. ಮತ್ತೊಂದು ಕಡೆ ಜಲಪ್ರಳಯ ನಲುಗುತ್ತಿರುವ ಜೀವಗಳು.ಇದು ದಕ್ಷಿಣದ ಕಾಶ್ಮಿರ ಎಂದು ಕರೆಸಿಕೊಂಡು ಮಡಿಕೇರಿಯ ಜೋಡುಪಾಲ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಬಳಿಕದ ಭೀಕರ ಪರಿಸ್ಥಿತಿ. ಸದ್ಯಕ್ಕೆ ಇಲ್ಲಿ ಉಳಿದಿರುವುದು ಮನುಷ್ಯನ ಜೀವ ಮಾತ್ರ. ಇತಿಹಾಸದಲ್ಲಿ ಇದುವರೆಗೆ ನಡೆಯದ ಪ್ರಕೃತಿ ವಿಕೋಪಕ್ಕೆ ಇಡೀ ಕಪ್ರದೇಶ ತುತ್ತಾಗಿದೆ. ಅಬ್ಬರದ ಮಳೆ, ಭೂಕುಸಿತ, ಬಿರುಗಾಳಿ, ಜಲಪ್ರಳಯಕ್ಕೆ ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಕೆಲವು ಕಡೆ ರಕ್ಷಣೆಕ್ಕಾಗಿ ಹಾತೊರೆಯುತ್ತಿರುವ ಜೀವಗಳನ್ನು ರಕ್ಷಿಸಲು ಸಾಧ್ಯವಾಗದ ಮಟ್ಟಿಗೆ ಪರಿಸ್ಥಿತಿ ನಲುಗಿಹೋಗಿದೆ. ಮಡಿಕೇರಿಯ ಜೋಡುಪಾಲ, ಮೊಣ್ಣಂಗೇರಿ, ಮದೆನಾಡು ಸಂಪಾಜೆ ಪ್ರದೇಶದ ಗ್ರಾಮಗಳು ಭೂಕುಸಿತ ಗೊಂಡ ಮೇಲೂ ಅಪಾಯದಲ್ಲಿದೆ. ಈ ಪ್ರದೇಶದಲ್ಲಿರುವ ಹಲವು ಗುಡ್ಡಗಳು ಬಿರುಕು ಬಿಟ್ಟು ಬಾಯ್ದೆರೆದು ನಿಂತಿದ್ದು. ಇಲ್ಲಿರುವ ಮನೆಗಳು ಯಾವಾಗ ಬೇಕಾದರೂ ಕಾಲಗರ್ಭ ಸೇರುವ ಸ್ಥಿತಿಯಲ್ಲಿದೆ. ಈಗಲೂ ನೂರಾರು ಜನರು ಬೆಟ್ಟದ ಮೇಲೆ ಆಶ್ರಯ ಪಡೆದಿದ್ದಾರೆ. ಭೀಕರ ಪ್ರಕೃತಿ ವಿಕೋಪದಿಂದ ಮಡಿಕೇರಿಯ ಜೋಡುಪಾಲ ಪ್ರದೇಶಗಳು ಇಲ್ಲಿನ ಜನರನ್ನು ೫ ದಶಕಗಳ ಹಿಂದಿನ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಹೊಟ್ಟೆ-ಬಟ್ಟೆಗೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಕುಸಿತದಿಂದ ಹೆದ್ದಾರಿ ಮೇಲೆ ಸಾವಿರಾರು ಲೋಡ್ ಮಣ್ಣು ಶೇಖರಣೆಗೊಂಡಿದೆ. ಬೃಹತ್ ಆಕಾರದ ಬಂಡೆಕಲ್ಲುಗಳು ರಸ್ತೆಯಲ್ಲಿದೆ. ರಸ್ತೆಯಲ್ಲಿದ್ದ ಸೇತುವೆಗಳು ಕೊಚ್ಚಿಕೊಂಡು ಹೋಗಿದೆ. ಹೆದ್ದಾರಿಗಳ ದುರಸ್ತಿಗೆ ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಇಲ್ಲಿನ ಕುಟುಂಬಗಳು ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಪ್ರವಾಹ ಪೀಡಿತ ಇಡೀ ಪ್ರದೇಶ ಕಗ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್ ಕಡಿತದಿಂದ ಕುಡಿಯುವ ನೀರು ಪೂರೈಕೆಯೂ ಸ್ಥಗಿತಗೊಂಡಿದೆ.ಜೋಡುಪಾಲ, ಮೊಣ್ಣಂಗೇರಿ ಮದೆನಾಡು ಪ್ರದೇಶಗಳಲ್ಲಿ ಸಂಭವಿಸಿದ ಪ್ರಕೃತಿ ದುರಂತಕ್ಕೆ ಈಗಾಗಲೇ ಸುಮಾರು 700ರಿಂದ 800 ಮನೆಗಳು ನೆಲಸಮವಾಗಿದೆ. ಸುಮಾರು1000 ದಿಂದ1500 ಜನರು ತಮ್ಮ ಮನೆ ಮಠ ಕಳೆದುಕೊಂಡು ಗಂಜಿಕೇಂದ್ರ ಮತ್ತು ಅವರ ಸಬಂಧಿಕರ ಮನೆಗಳಲ್ಲಿ ಆಶ್ರಯ ಪಡುತ್ತಿದ್ದಾರೆ. ದನ, ಕರುಗಳು, ನಾಯಿ, ಕೋಳಿ ಮುಂತಾದ ಸಾಕು ಪ್ರಾಣಿಗಳು ದುರಂತ ನಡೆದ ಸ್ಥಳದಲ್ಲಿ ಕಾಣ ಸಿಗುವುದೇ ಇಲ್ಲ. ಬದುಕುಳಿದ ಸಣ್ಣ ಪ್ರಾಣಿಗಳು ತನ್ನ ಮನೆಯವರ ಹುಡುಗಾಟಕ್ಕೆ ಮೂಕರೋದನ ಮಾತ್ರ ಕಂಡು ಬರುತ್ತಿದೆ. ಸುಮಾರು200 ರಷ್ಟು ಮನೆಗಳು ನಿರಾಶ್ರಿತರ ಕಣ್ಣೆದುರೆ, ನೆಲಸಮಗೊಂಡಿದೆ ಧಾನಿಗಳಿಂದ ಅಪಾರ ಪ್ರಮಾಣದಲ್ಲಿ ನಿರಾಶ್ರಿತರ ಕೇಂದ್ರಗಳಿಗೆ ಆಹಾರ ವಸ್ತುಗಳು, ಬಟ್ಟೆ ಸಾಮಾಗ್ರಿಗಳು, ಚಪ್ಪಲಿ, ಬೆಡ್‌ಶೀಟ್ ಇತರ ಮೂಲಭೂತ ವಸ್ತುಗಳು ಸಮಾರೋಪಗತಿಯಲ್ಲಿ ಹರಿದು ಬರುತ್ತಿದೆ. ಇದಕ್ಕೆ ಊರಿನವರು, ಸಂಘಸಂಸ್ಥೆಗಳು ಸಾಥ್ ನೀಡುತ್ತಿದೆ. ಇಂದು ಬೆಳ್ಳಿಗೆ ಮದೆನಾಡು ಬಳಿ ಕಾಫಿತೋಟದಲ್ಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಮೂಲದ6 ಮಂದಿ ಸೇರಿದಂತೆ ಸುಮಾರು15ಮಂದಿಯನ್ನು ರಕ್ಷಣೆ ಮಾಡಲಾಗಿದೆ.ದುರಂತ ನಡೆದ ಆರಂಭದ ದಿನದಲ್ಲಿ ಸುಳ್ಯದ ಎಸ್.ಐ ಮತ್ತು ಸಿಬ್ಬಂಧಿಗಳ ತಂಡದ ಜೊತೆ ಯುವಕರ ತಂಡಗಳಿಂದ ರಕ್ಷಣ ಕಾರ್ಯಚರಣೆಯಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿತ್ತು. ಆದರೆ ಈ ಸ್ಥಳಕ್ಕೆ ಊರಿನ ಮತ್ತು ಪರ ಊರಿನ ಯುವಕರು ಬಂದು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ವೇಳೆ ರಕ್ಷಣಾ ಪಡೆಯ ಸದಸ್ಯರನ್ನು ಬಿಟ್ಟರೆ ಬೇರೆ ಯಾವ ಅಧಿಕಾರಿ ವರ್ಗ ಭಾಗವಹಿಸುತ್ತಿರಲಿಲ್ಲ. ರಾಜ್ಯ ಸರಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಕೇವಲ ವರದಿ ಸಲ್ಲಿಸಲು ಮಾತ್ರ ಅಧಿಕಾರಿಗಳು ಬಂದು ಹೋಗುತ್ತಿದ್ದರು. ಪ್ರದೇಶದಲ್ಲಿ ಸಾಕಷ್ಟು ಜನರು ಭಾಗವಹಿಸಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡರೂ ಕಲ್ಲುಬಂಡೆ ಮತ್ತು ಬೃಹತ್ ಗಾತ್ರದ ಮರಗಳು ಇರುವುದರಿಂದ ಮೃತದೇಹಗಳ ಹುಡುಗಾಟಕ್ಕೆ ಕಷ್ಟಸಾಧ್ಯ ಇದನ್ನು ತೆರವುಗೊಳಿಸಲು ಜೆಸಿಬಿ, ಕ್ರೈನ್‌ಗಳ ಸಹಾಯ ಪಡೆಯಬೇಕು. ಇದಕ್ಕೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಸ್ಥಳಿಯವಾಗಿ ಆರೋಪಗಳು ಕೇಳಿಬರುತ್ತಿದೆ.ಇಂದು ಮೊಣ್ಣಂಗೇರಿ ಪ್ರದೇಶದಲ್ಲಿ ಬೃಹತ್ ಆಕಾರದ ಗುಡ್ಡ ಕುಸಿಯಲು ಆರಂಭವಾಗಿದ್ದು. ಇದನ್ನು ಮನಗಂಡಿರುವ ಅಧಿಕಾರಿಗಳು ಮತ್ತು ರಕ್ಷಣಾ ಪಡೆಗಳು ಪ್ರಕೃತಿ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್, ಗೃಹರಕ್ಷಕದಳ, ಪೋಲಿಸರು ಮಾತ್ರ ಇದ್ದಾರೆ. ಈಗಾಗಲೇ ಸಂಭವಿಸದ ದುರಂತಕ್ಕೆ ಜೋಡುಪಾಲದ ನಾಲ್ಕು ಮಂದಿ ಮತ್ತು ಮೊಣ್ಣಂಗೇರಿಯ ಮೂವರು ನಾಪತ್ತೆ ಯಾಗಿದ್ದಾರೆ.ಕೊಡಗುನಲ್ಲಿ ಸಂಭವಿಸಿದ ಪ್ರಕೃತಿ ದುರಂತದ ಪರಿಣಾಮ ದಕ್ಷಿಣ ಕನ್ನಡ ಗಡಿಭಾಗದ ಸಂಪಾಜೆಯ ಅರೆಕಲ್ಲು, ಕುಂಟಿಕಾನ, ಗುಡ್ಡೆಗದ್ದೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಜರಿಯುತ್ತಿದೆ. ಅರೆಕಲ್ಲು ಪ್ರದೇಶದಲ್ಲಿ ವಾಸಿಸುತ್ತಿದ್ದ ಎಲ್ಲಾ ಜನರನ್ನು ಗಂಜಿಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನ ಕಡಮಕಲ್ ವ್ಯಾಪ್ತಿಯಲ್ಲಿ ಗುಡ್ಡ ಬಿರುಕು ಬಿಟ್ಟಿದ್ದು ಸುಮಾರು 20 ರಿಂದ 25 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ. ಈ ಪ್ರದೇಶದಲ್ಲಿ ದೊಡ್ಡ ರೀತಿಯ ಶಬ್ದಗಳು ಭೂಮಿಯಿಂದ ಹೊರಹೊಮ್ಮುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸುಳ್ಯದ ಮರ್ಕಂಜ ಗ್ರಾಮದ ರೆಂಜಾಳ ಸಮೀಪದ ಮಾವಜಿ ಎಂಬಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದ್ದು ಎರಡು ಕುಟುಂಬಗಳು ಮನೆಯನ್ನು ಖಾಲಿ ಮಾಡಿಕೊಂಡಿದ್ದಾರೆ. ಮಾವಜಿಯ ಕೇಶವ ಗೌಡ ಮತ್ತು ಮೇದಪ್ಪ ಗೌಡರ ಮನೆಗಳ ಹಿಂಬದಿಯ ಗುಡ್ಡ ಕುಸಿಯುತ್ತಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟ ಪರಿಣಾಮ ಜನರನ್ನು ಸ್ಥಳಾಂತರ ಮಾಡಲಾಗಿದೆ.

Related posts

Leave a Reply