Header Ads
Header Ads
Breaking News

ಭ್ರಷ್ಟಾಚಾರದ ವಿರುದ್ದ ಕೇರಳ ಯಾತ್ರೆಗೆ ಚಾಲನೆ ಪೌಲೋಸ್ ನೇತೃತ್ವದಲ್ಲಿ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಯಾತ್ರೆ

ಭ್ರಷ್ಟಾಚಾರದ ವಿರುದ್ದ ತಿರುವನಂತಪುರದ ಸಾಮಾಜಿಕ ಸೇವಾ ಕಾರ್ಯಕರ್ತ ಎಂ.ಎಂ ಪೌಲೋಸ್ ನಡೆಸುವ ಕೇರಳ ಯಾತ್ರೆಗೆ ಕರ್ನಾಟಕ ಕೇರಳ ಗಡಿಪ್ರದೇಶವಾದ ತಲಪಾಡಿಯಲ್ಲಿ ಚಾಲನೆ ದೊರಕಿತು. ಸಮಾಜದ ಎಲ್ಲಾ ಘಟಕದಲ್ಲೂ ಭ್ರಷ್ಟಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಈ ಕೇರಳ ಯಾತ್ರೆಯನ್ನು ಆರಂಭಿಸಲಾಗಿದೆ.

ರಾಜಕೀಯ ಮುಕ್ತವಾದ ಪೌಲೋಸ್ ರವರ ಈ ಸಲದ ಯಾತ್ರೆಯು ಫೆಬ್ರವರಿ 7 ರಿಂದ ಅರಂಭಗೊಂಡಿದೆ ಪ್ರತಿಯೊಂದು ಗ್ರಾಮಗಳಲ್ಲೂ ಸಂಚರಿಸಿ ಭ್ರಷ್ಟಾಚಾರದ ವಿರುದ್ದ ಜನರು ಎದ್ದೇಳುವಂತೆ ಕರೆ ನೀಡಿಕೊಂಡು ತಿರುವನಂತಪುರದಲ್ಲಿ ಕೇರಳ ಯಾತ್ರೆ ಸಮಾಪ್ತಿ ಗೊಳ್ಳಲಿದೆ.ತಲಪಾಡಿಯಲ್ಲಿ ಕೆ.ಪಿ ಸೋಮ ಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕೇರಳ ಯಾತ್ರೆಯನ್ನು ಸ್ಥಳೀಯ ವೈದ್ಯ ಕೆ.ಎ ಖಾದರ್ ರವರು ಚಾಲನೆ ನೀಡಿದರು. ಈ ಸಂದರ್ಭ ಜಾಥಾ ನಾಯಕ ಎಂ.ಎಂ ಪೌಲೋಸ್, ಬಿ ನಾರಾಯಣ, ಸಿ.ನಾರಾಯಣ ಮಾಸ್ಟರ್, ಕೃಷ್ಣಪ್ಪ ಪೂಜಾರಿ, ಎಂ ಈಶ್ವರ ಮಾಸ್ಟರ್ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply