Header Ads
Header Ads
Header Ads
Breaking News

ಮಂಕುಡೆ ಸರ್ಕಾರಿ ಉನ್ನತ್ತೀಕರಿಸಿದ ಶಾಲೆಯ ಶತಮಾನೋತ್ಸವ

ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಮಂಕುಡೆ ಸರ್ಕಾರಿ ಉನ್ನತ್ತೀಕರಿಸಿದ ಶಾಲೆಯ ಶತಮಾನೋತ್ಸವ ಕಟ್ಟಡದ ಉದ್ಘಾಟನೆ ಮತ್ತು ಶತ ಸಂಭ್ರಮದ ಉದ್ಘಾಟನೆ ಹಾಗೂ ಮಂಕುಡೆ-ಕುಡ್ತಮುಗೇರು ಹಳೆ ವಿದ್ಯಾರ್ಥಿ ಯುವಕ ಮಂಡಲದ ವಾರ್ಷಿಕೋತ್ಸವವು ನಡೆಯಿತು.


ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಮಂಕುಡೆ ರಾಮಕೃಷ್ಣ ಆಚಾರ್ ಶತಸಂಭ್ರಮವನ್ನು ಉದ್ಘಾಟಿಸಿದರು. ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನವೀಕೃತ ಧ್ವಜಸ್ತಂಭ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶತಮಾನೋತ್ಸವ ಕಟ್ಟಡ ಉದ್ಘಾಟಿಸಿದರು. ಮಕ್ಕಳಿಂದ ನೃತ್ಯ ಸಂಭ್ರಮ, ಪೂರಾ ಆರೆನ ಎಂಬ ತುಳು ನಾಟಕ ಪ್ರದರ್ಶನಗೊಂಡಿತು. ಮಂಕುಡೆ, ಕುಡ್ತಮುಗೇರು, ಕೋಜುಗುಳಿ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಸಂಭ್ರಮ, ಮಂಕುಡೆ ಶಾಲೆ ಮಕ್ಕಳಿಂದ ನೃತ್ಯ ವೈಭವವಿತ್ತು. ಸಾಧನೆಗೈದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ, ಮಾತನಾಡಿ, ಪ್ರತಿಯೊಬ್ಬನ ಮನಸ್ಸೂ ಮಕ್ಕಳ ಮನಸ್ಸಿನಂತಿರಬೇಕು. ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು. ಮಕ್ಕಳ ಮನಸ್ಸಿಗೆ ಹೆತ್ತವರೂ ನೋವುಂಟುಮಾಡಬಾರದು. ಮಕ್ಕಳ ಭಾವನೆಯಲ್ಲಿ ಶಿಕ್ಷಕರು ವಿಷಬೀಜ ಬಿತ್ತಬಾರದು. ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸಬಾರದು. ಕರ್ಕಶ ಸ್ವರದಿಂದ ಜೈಕಾರ ಹಾಕುವುದೇ ದೇಶಭಕ್ತಿಯಲ್ಲ. ಪ್ರತಿಯೊಬ್ಬನ ಅಂತರಂಗದಲ್ಲಿ ದೇಶಪ್ರೇಮ ಉದಿಸಬೇಕು ಎಂದು ಹೇಳಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್‌ಆಲಿ, ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ತಾ.ಪಂ.ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಪವಿತ್ರ ಪೂಂಜ ಕೊಡಂಗೆ, ಹರೀಶ್ ಟೈಲರ್ ಮಂಕುಡೆ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ದೇವಕಿ, ವೇದಾವತಿ ಪರ್ತಿಪ್ಪಾಡಿ, ವೇದಾವತಿ ಕುದ್ರಿಯ, ಪ್ರಗತಿಪರ ಕೃಷಿಕ ಜತ್ತಪ್ಪ ಪೂಂಜ ಕೊಡಂಗೆ, ಮುಖ್ಯ ಶಿಕ್ಷಕಿ ಗಟ್ರೂಡ್ ಡಿ’ಸೋಜ, ರಾಮ ಬಂಗೇರ ಮತ್ತು ಪ್ರಶಾಂತ್ ಪೂಜಾರಿ, ಮಂಚಿ ವಲಯ ಇ.ಸಿ.ಒ. ಪ್ರಕಾಶ್, ಸಿ.ಆರ್.ಪಿ.ಗಂಗಾಧರ್, ಶಿಕ್ಷಕರಾದ ಪರಮೇಶ್ವರ ಆಚಾರ್ಯ, ಅಶೋಕ ಮಾಂಬಾಡಿ, ಎಸ್‌ಡಿಎಂಸಿ ಅಧ್ಯಕ್ಷೆ ವಿಮಲ ಲಂಬೋದರ ಪೂಜಾರಿ ಪರ್ತಿಪ್ಪಾಡಿ ಅವರು ಧ್ವಜಾರೋಹಣ ಭಾಗವಹಿಸಿದ್ದರು.

Related posts

Leave a Reply