Header Ads
Breaking News

ಮಂಗಳಮುಖಿಯರಿಗಾಗಿ ’ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ,ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕಾರ್ಯಕ್ರಮ ನಗರದ ಸೈಂಟ್ ಅಲೋಶಿಯಸ್ ಸಭಾಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಟ್ರಾನ್ಸ್‌ಜಂಡರ್ ಆಕ್ಟಿವಿಸ್ಟ್ ಅಕ್ಕಯ್ಯ ಪದ್ಮಶಾಲಿನಿ ಮಾತನಾಡಿ ಸಮಾಜದಲ್ಲಿ ಮಂಗಳಮುಖಿಯ ಮೇಲಾಗುತ್ತಿರುವ ದಬ್ಬಾಳಿಕೆ.ಮತ್ತು ಅವರನ್ನು ಸಮಾಜ ನೋಡುವ ಕ್ರಮ ಬದಲಾಗಬೇಕು ಅವರು ಕೂಡ ಎಲ್ಲರೊಡನೆ ಬೆರೆಯುವಂತಾಗಬೇಕು ಎಂದರು.ಈ ಸಂದರ್ಭ ’ಪ್ರೀತಿ,ಜೀವನ ಮತ್ತು ಕಾನೂನುಗಳ ಮೇಲೆ ಲಿಂಗತ್ವಾತೀತ,ಲಿಂಗತ್ವ ಬದಲಾಯಿಸಿದ ವ್ಯಕ್ತಿ ಮತ್ತು ಲೈಂಗಿಕ ಅಲ್ಪಸಂಖ್ಯಾತರ ದೃಷ್ಟಿದರ್ಶನ’ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಾನು ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಯ್ಕೆ ಆದಾಗ ನನ್ನಲ್ಲಿ ಮಂಗಳೂರಿನ ಬಗ್ಗೆ ಬೆರೆಯೇ ಅಭಿಪ್ರಾಯವಿತ್ತು ಆದರೆ ಈಗ ನಾನು ಮಂಗಳೂರಿನಲ್ಲಿದ್ದೇನೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ.ಮಂಗಳಮುಖಿಯರ ಬಗ್ಗೆ ನನಗೆ ಗೌರವವಿದೆ ಮತ್ತು ಅವರ ಅಭಿವೃಧ್ದಿಗೆ ನನ್ನ ಕಡೆಯಿಂದಾದ ಅನುದಾನ ನೀಡುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಟ್ರಾನ್ಸ್‌ಜಂಡರ್ ಆಕ್ಟಿವಿಸ್ಟ್ ವಿದ್ಯಾ ದಿನಕರ್,ಪರಿವರ್ತನಾ ಸಂಸ್ಥೆಯ ಮಂಗಳಮುಖಿಯರಾದ ಸಂಜನಾ, ಶ್ರೀ ನಿಧಿ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್ ಮಾರ್ಟಿಸ್, ಮತ್ತು ವಿದ್ಯಾರ್ಥಿಗಳು ಅದ್ಯಾಪಕರು ಉಪಸ್ಥಿತರಿದ್ದರು.

Related posts

Leave a Reply