Header Ads
Breaking News

ಮಂಗಳೂರನ್ನು ಶಾಸಕ ಯು.ಟಿ. ಖಾದರ್ ಅವರಿಗೆ ಕಾಂಗ್ರೆಸ್ ಕೊಡಲ್ಲ : ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ

ಮಂಗಳೂರಿನ ವಿಚಾರದಲ್ಲಿ ಹೊರಗಿನವರು ಬರಬೇಡಿ, ಮಂಗಳೂರು ಭಾರತದ ಅವಿಭಾಜ್ಯ ಅಂಗ. ಮಂಗಳೂರು ಕಾಶ್ಮೀರದ ರೀತಿ ಅಲ್ಲ. ಮಂಗಳೂರನ್ನು ಶಾಸಕ ಯು.ಟಿ. ಖಾದರ್ ಅವರಿಗೆ ಕಾಂಗ್ರೆಸ್ ಕೊಡಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಗಳೂರು ಗಲಭೆ ಪ್ರಕರಣದಲ್ಲಿ ಮೃತಪಟ್ಟವರಿಗೆ ಪರಿಹಾರ ವಾಪಸ್ ಮಾಡಲಾಗಿದೆ. ಮೊದಲು ಮಾನವೀಯ ನೆಲೆಯಲ್ಲಿ ಪರಿಹಾರ ನೀಡಿದ್ದೇವೆ. ಪರಿಹಾರ ಘೋಷಣೆ ಮಾಡಿದ ಬಳಿಕ ಅಪರಾಧಿಗಳೆಂದು ಗೊತ್ತಾಯ್ತು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅಪರಾಧಿಗಳೆಂದು ಸಾಬೀತಾದ್ರೆ ಪರಿಹಾರದ ಪ್ರಶ್ನೆ ಇಲ್ಲ. ನಿರಾಪರಾಧಿ ಅಂತಾ ಆದ್ರೆ ಪರಿಹಾರ ನೀಡುತ್ತೇವೆ ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ಕಾಂಗ್ರೆಸ್‌ಗೆ ಯಾವಗಲೂ ವೋಟ್‌ಬ್ಯಾಂಕ್‌ನ ಬಗ್ಗೆ ಚಿಂತೆ ಎಂಬಂತಾಗಿದೆ. ಮೋದಿ ಸಬ್ ಕಾ ವಿಕಾಸ ಅಂದ್ರೆ ಕಾಂಗ್ರೆಸ್ ಧರ್ಮಗಳನ್ನು ದೂರ ಮಾಡುತ್ತಿದೆ. ವೀರಶೈವ ಲಿಂಗಾಯಿತರನ್ನು ದೂರ ಮಾಡಿದೆ. ಆದರೂ ಕಾಂಗ್ರೆಸ್‌ಗೆ ಬುದ್ಧಿ ಬಂದಿಲ್ಲ. ಡಿ.ಕೆ.ಶಿವಕುಮಾರ್ ಕೆಂಪೇಗೌಡರ ಅನುಯಾಯಿ ಅಂತಾರೆ. ನಿರ್ಮಾಲಾನಂದ ಸ್ವಾಮಿಗಳ ಭಕ್ತ ಅಂತಾರೆ. ಆದರೆ ಯೇಸು ಪ್ರತಿಮೆ ಮಾಡೋವಾಗ ಕೇಂಪೆಗೌಡರ ನೆನಪು ಯಾಕೆ ಆಗಿಲ್ಲ. ಸ್ವಾಮೀಜಿಗಳ ನೆನಪು ಯಾಕೆ ಆಗಿಲ್ಲ. ಡಿಕೆಶಿ ಹಿಂದೂ ಸಮಾಜದ ದೇವರ ಬಗ್ಗೆಯೂ ಚಿಂತಿಸಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Related posts

Leave a Reply

Your email address will not be published. Required fields are marked *