Header Ads
Breaking News

ಮಂಗಳೂರಲ್ಲಿ ನೀರು ರೇಶನಿಂಗ್ ವಿಚಾರ : ಐವನ್ ಡಿಸೋಜಾ ನಿಲುವೇನು ಗೊತ್ತೇ?

ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ 5.21 ಮೀ. ನೀರಿನ ಸಂಗ್ರಹವಿದ್ದು, ನಿತ್ಯ ಪೂರೈಕೆ ಮಾಡಿದರೂ ಕನಿಷ್ಠ 30 ದಿನಗಳಿಗೆ ಸಾಕಾಗುತ್ತದೆ. ಆದ್ದರಿಂದ ಕೂಡಲೆ ನೀರಿನ ರೇಶನಿಂಗ್ ರದ್ದುಗೊಳಿಸಿ ನಿತ್ಯ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ತುಂಬೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾದರೆ ಎಎಂಆರ್ ಡ್ಯಾಂನಲ್ಲಿ ಪ್ರಸ್ತುತ ಸಮುದ್ರ ಮಟ್ಟದಿಂದ 14.04 ಮೀ. ನೀರಿನ ಸಂಗ್ರಹವಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗೆ ತಿಳಿಸಲಾಗಿದ್ದು, ಈ ಮಾಸಾಂತ್ಯದೊಳಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

Related posts

Leave a Reply

Your email address will not be published. Required fields are marked *