Header Ads
Header Ads
Breaking News

ಮಂಗಳೂರಲ್ಲಿ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವಕ್ಕೆ ಚಾಲನೆ

 ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಂತ ಅಲೋಶಿಯಸ್ ಕಾಲೇಜು ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನ ಕಾಲ ನಡೆಯುವ ಪ್ರಾದೇಶಿಕ ಚಲನಚಿತ್ರೋತ್ಸವಕ್ಕೆ ಚಾಲನೆ ದೊರಕಿದೆ.ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಚಿತ್ರಗಳ ಮೂಲಕ ಉದ್ದೇಶ ದಾಖಲೀಕರಣ , ಕಡಿಮೆ ವೆಚ್ಚದಲ್ಲಿ ಅದ್ಭುತ ಚಿತ್ರಗಳನ್ನ ನಿರ್ಮಿಸಲು ಸಾಧ್ಯವಿದೆ. ಅದರೆ ತುಳುವಿನಲ್ಲಿ ಗುಣಮಟ್ಟಕ್ಕಿಂತ ಸಂಖ್ಯೆ ಯ ಕಡೆಗೆ ಗಮನ ನೀಡಿ ಪೈಪೋಟಿ ಆರಂಭವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಬಳಿಕ ನಟ, ನಿರ್ಮಾಪಕ ರಿಷಬ್ ಶೆಟ್ಟಿ ಮಾತನಾಡಿ, ಸಿನಿಮಾ ಭಾಷೆಯನ್ನು ಮೀರಿದ್ದು, ಒಂದು ಪ್ರದೇಶದ ಸಂಸ್ಕೃತಿ ಸಾಹಿತ್ಯ ಜನಜೀವನ ಹೇಗೆ ಎಂಬುದನ್ನು ಸಿನಿಮಾ ಹೇಳುವಂತಾಗಬೇಕೆಂದರುಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲರಾದ ರೇ.ಫಾದರ್ ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ನಿರ್ದೇಶರಾದ ಶಿವಧ್ವಜ್, ರಿಚರ್ಡ್ ಕ್ಯಾಸ್ಟಲಿನೋ, ಪ್ರಾದೇಶಿಕ ಚಲನಚಿತ್ರೋತ್ಸವ ಸಮಿತಿ ಸಂಚಾಲಕ ಡಾ.ನಾ.ದಾಮೋದರ ಶೆಟ್ಟಿ, ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸರಸ್ವತಿ ಉಪಸ್ಥಿತರಿದ್ದರು

Related posts

Leave a Reply