Header Ads
Breaking News

ಮಂಗಳೂರಲ್ಲಿ ಹೊಸ ವರ್ಷಾಚರಣೆ ಕಠಿಣ : ನಿಯಮ ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಪೊಲೀಸರಿಂದ ಕ್ರಮ

ಮಂಗಳೂರಲ್ಲಿ ಹೊಸ ವರ್ಷಾಚರಣೆ ಈ ಬಾರಿ ಕಠಿಣವಾಗಲಿದೆ. ನಗರದ ಎಲ್ಲಾ ಪಾರ್ಟಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಯಾರಾದ್ರೂ ನಿಯಮ ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಕ್ರಮ ಕ್ರಮಗೊಳ್ಳಲಾಗುತ್ತಿದೆ. ಹೀಗಾಂತ ಸ್ವತಃ ನಗರ ಪೊಲೀಸ್ ಆಯುಕ್ತರಾದ ಡಾ| ಪಿ.ಎಸ್.ಹರ್ಷ ವಾರ್ನಿಂಗ್ ಕೊಟ್ಟಿದ್ದಾರೆ. 12 ಗಂಟೆ 5 ನಿಮಿಷಕ್ಕೆ ಹೊಸ ವರ್ಷಾಚರಣೆ ಬಂದ್ ಮಾಡಬೇಕು. 12.15ಕ್ಕೆ ಜನರು ಮನೆ ಸೇರಿಕೊಳ್ಳಬೇಕು. ನಿಯಮ ತಪ್ಪಿದರೆ ಮುಲಾಜಿಲ್ಲದೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ, ಹೆಣ್ಣು ಮಕ್ಕಳನ್ನು ಚುಡಾಯಿಸಿದ್ರೆ ಹುಷಾರ್ ಅಂತಾ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ, ಮಂಗಳೂರಿನ ಎಲ್ಲಾ ಪಾರ್ಟಿಗಳಿಗೆ ಮಹಿಳಾ ಪೊಲೀಸರ ಕಣ್ಣು ಇಟ್ಟಿದ್ದಾರೆ. ಮಫ್ತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ, ಹೊಸ ವರ್ಷಾಚರಣೆಗೆ ಹೆಜ್ಜೆ ಹೆಜ್ಜೆಗೂ ಪೊಲೀಸ್ ಭದ್ರತೆ ನೀಡಲಾಗುತ್ತಿದೆ ಅಂತಾ ತಿಳಿಸಿದರು.

Related posts

Leave a Reply

Your email address will not be published. Required fields are marked *