Header Ads
Header Ads
Breaking News

ಹೆಲ್ಮೆಟ್ ಧರಿಸಿ ಕದ್ರಿಯ ಹೋಟೇಲ್‌ಗೆ ಕಲ್ಲೆಸೆತ – ಆರೋಪಿಯ ಬಂಧನ

 

ಮಂಗಳೂರು : ಭಾರತ್ ಬಂದ್ ವೇಳೆ ಮಂಗಳೂರಿನ ಶಿವಭಾಗ್ ಹೊಟೇಲ್‌ಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಯುವ ಕಾಂಗ್ರೆಸ್ ಕಾರ್ಯಕರ್ತ ಅಮರ್ ಸೋನ್ಸ್ ಎಂದು ಗುರುತಿಸಲಾಗಿದೆ. ಸೋಮವಾರ ನಡೆದ ಬಂದ್ ವೇಳೆ ನಗರದ ಶಿವಭಾಗ್ ಹೊಟೇಲ್ ಮೇಲೆ ಹೆಲ್ಮೆಟ್ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದ.

ಆದರೆ ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಹೀಗಾಗಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ನಗರದ ಬೇರೆ ಭಾಗದ ಸಿಸಿ ಟಿವಿ ಕ್ಯಾಮಾರಗಳ ಆಧಾರದಲ್ಲಿ ಆರೋಪಿಯನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ. ಬೈಕ್ ನಲ್ಲಿ ಇಬ್ಬರು ಆರೋಪಿಗಳು ಬಂದಿದ್ದು, ಮತ್ತೋರ್ವನ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆಯಲ್ಲಿ ಹೊಟೇಲ್ ಸಿಬ್ಬಂದಿ ಜಯಂತ್ ಎಂಬವರಿಗೆ ಗಾಯವಾಗಿತ್ತು.

Related posts

Leave a Reply