Header Ads
Header Ads
Breaking News

ಮಂಗಳೂರಿಗೂ ಬಂದಿದೆ ಬ್ಯಾಂಕ್‌ ಎಟಿಎಂಗೆ ರಹಸ್ಯವಾಗಿ ಕೆಮರಾ ಅಳವಡಿಸಿ ಹಣ ಲಪಟಾಯಿಸುವ ಜಾಲ

ನಗರದ ಮೂರು  ಎಟಿಎಂಗಳಲ್ಲಿ ಗ್ರಾಹಕರು ಈ ರೀತಿ ಹಣ ಕಳೆದುಕೊಂಡು ಮೋಸ ಹೋಗಿರುವುದನ್ನು ಮಂಗಳೂರು ಸೈಬರ್‌ ಪೊಲೀಸರು ಪತ್ತೆ ಮಾಡಿದ್ದಾರೆ. ಮಣ್ಣಗುಡ್ಡೆ ಮತ್ತು ಕುದ್ರೋಳಿಯ ಕೆನರಾ ಬ್ಯಾಂಕ್‌ ಎಟಿಎಂ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸುರತ್ಕಲ್‌ ಎನ್‌ಐಟಿಕೆ ಆವರಣದ ಎಟಿಎಂ ಮೆಶಿನ್‌ನಲ್ಲಿ ಈ ರೀತಿ ಹಣ ಎಗರಿಸಲಾಗಿದೆ. ಬ್ಯಾಂಕ್‌ ಎಟಿಎಂ ಮೆಶಿನ್‌ಗೆ ರಹಸ್ಯವಾಗಿ ಚಿಪ್‌ ಹಾಗೂ ಕೆಮರಾ ಅಳವಡಿಸಿ ಗ್ರಾಹಕರ ಮಾಹಿತಿ ಕದ್ದು, ಬೇರೆಡೆ ಕುಳಿತು ಹಣ ಲಪಟಾಯಿಸುವ ಜಾಲ ಈಗ ಮಂಗಳೂರು ನಗರಕ್ಕೂ ವ್ಯಾಪಿಸಿರುವುದು ಬೆಳಕಿಗೆ ಬಂದಿದೆ.

ವಂಚನೆ ಜಾಲದಡಿ ಹಣ ಕಳೆದುಕೊಂಡಿರುವ ಸಂಬಂಧ ಈಗಾಗಲೇ ನಾಲ್ವರು ನಗರದ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆೆ. ತಮ್ಮ ಅರಿವಿಗೆ ಬಾರದೆ ಎಟಿಎಂ ಮೂಲಕ ಹಣ ಡ್ರಾ ಆಗಿದೆ ಎಂಬುದಾಗಿ ಒಂದು ವಾರದಲ್ಲಿ ನಾಲ್ಕು ಮಂದಿ ನಗರದ ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಎಟಿಎಂ ಸ್ಕಿಮಿಂಗ್‌ ಬೆಳಕಿಗೆ ಬಂದಿದೆ.  ಉ.ಭಾರತದ ಎಟಿಎಂ ಸ್ಕಿಮ್ಮರ್‌ಗಳು ದಂಧೆಗಾಗಿ ಕೆಲವರನ್ನು ಮಂಗಳೂರಿಗೆ ಕಳುಹಿಸಿದ್ದು, ನಗರದಲ್ಲಿ ಈ ಕೃತ್ಯ ಎಸಗುತ್ತಿದ್ದಾರೆ. ಇದಕ್ಕಾಗಿ ನೇಮಕ ಕೊಂಡಿರುವ ಖದೀಮರು ನೈಜೀರಿಯನ್‌ ಪ್ರಜೆಗಳು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

ಎಟಿಎಂನ ಕಾರ್ಡ್‌ ತೂರಿಸಿ ಸ್ವೆ„ಪ್‌ ಮಾಡುವ ಕಾರ್ಡ್‌ ರೀಡರ್‌ನ ಹೊರ ಭಾಗದಲ್ಲಿ ವಂಚಕರು ನಕಲಿ ಕಾರ್ಡ್‌ ರೀಡರ್‌ ಅಳವಡಿಸುತ್ತಾರೆ. ಇದರಲ್ಲಿರುವ ಮೆಮೊರಿ ಕಾರ್ಡ್‌ ಸ್ವೆಪ್‌ ಆಗುವ ಪ್ರತಿ ಎಟಿಎಂ ಕಾರ್ಡಿನ ವಿವರಗಳನ್ನು ದಾಖಲಿಸಿಕೊಳ್ಳುತ್ತದೆ. ಎಟಿಎಂ ಮೆಶಿನ್‌ ಕೀ ಬೋರ್ಡ್‌ನ ಮೇಲ್ಭಾಗದಲ್ಲಿ ಪಿನ್‌ ಕೆಮರಾ ಇರುವ ಮೌಲ್ಡಿಂಗ್‌ನ್ನು ಕಳ್ಳರು ಅಳವಡಿಸುತ್ತಾರೆ. ಗ್ರಾಹಕರು ದಾಖಲಿಸುವ ಪಾಸ್‌ವರ್ಡ್‌/ ಪಿನ್‌ ನಂಬರ್‌ ಮಾಹಿತಿ ಕೂಡ ಹೀಗೆ ವಂಚಕರ ಪಾಲಾಗುತ್ತದೆ. ಕಳ್ಳರು ಮುಂಜಾನೆ 3- 4 ಗಂಟೆ ವೇಳೆ, ವಾಚ್‌ಮನ್‌ ಇಲ್ಲದಿರುವ ಅಥವಾ ನಿದ್ದೆಗೆ ಜಾರಿದ ಸಮಯದಲ್ಲಿ ಮತ್ತು ಸಿಸಿ ಕೆಮರಾ ಕಾರ್ಯ ನಿರ್ವಹಿಸದಿರುವ ಎಟಿಎಂಗಳಲ್ಲಿ ಈ ರೀತಿ ನಕಲಿ ಕಾರ್ಡ್‌ ರೀಡರ್‌ ಮತ್ತು ಪಿನ್‌ ಕೆಮರಾ ಡಿವೈಸ್‌ ಅಳವಡಿಸಿ ತಮ್ಮ ಕರಾಮತ್ತು ನಡೆಸುತ್ತಾರೆ. 

 

 

 

 

 

 

 

 

Related posts

Leave a Reply