Header Ads
Header Ads
Breaking News

ಮಂಗಳೂರಿಗೆ ಆಗಮಿಸಿದ ಪುನೀತ್ ರಾಜ್ ಕುಮಾರ್

ಕುಡ್ಲದಕ್ಲೆಗ್ ಎನ್ನ ನಮಸ್ಕಾರ. ತುಳು ಶುದ್ಧ ಬರ್ಪುಜಿ. ಒಂತೆ ಒಂತೆ ಗೊತ್ತುಂಡು. ಪಿಕ್ಚರ್‌ಗ್ ಮಾತೆರ್ಲಾ ಸಪೋರ್ಟ್ ಮಲ್ಪೊಡು.. ಹೀಗೆಂದು ಅಂದವರು ಯಾರು ಗೊತ್ತಾ..? ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್…

ಹೌದು, ನಟ ಸಾರ್ವಭೌಮ ಚಿತ್ರದ ಪ್ರಚಾರಕ್ಕಾಗಿ ನಟ ಪುನೀತ್ ರಾಜ್ ಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ರು. ರಾಜ್ಯಾದ್ಯಂತ ಯಶಸ್ವಿ ಕಾಣ್ತಾ ಇರುವ ನಟಸಾರ್ವಭೌಮ ಚಿತ್ರವು ನಗರದ ಸುಚಿತ್ರ ಚಿತ್ರಮಂದಿರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಜೊತೆಯಲ್ಲಿ ಚಿತ್ರ ವಿಕ್ಷೀಸಿದ್ರು.ಬಳಿಕ ವೇದಿಕೆ ಆಗಮಿಸಿದ ಅಪ್ಪು, ಅಭಿಮಾನಿಗಳಿಗೆ ಕೈಕುಲುಕಿದರು.

ಮಂಗಳೂರಿನ ಜನರ ನಡವಳಿಕೆ ತುಂಬಾ ಇಷ್ಟ , ಇಲ್ಲಿನ ಜನರ ನೇರ ಸ್ಪಷ್ಟ ಮಾತು, ಇಲ್ಲಿನ ಮೀನಿನ ವಿವಿಧ ಖಾದ್ಯ ನನಗೆ ಬಹಳ ಅಚ್ಚುಮೆಚ್ಚು. ಕನ್ನಡ ಸಿನಿಮಾದಂತೆ ತುಳು ಸಿನಿಮಾರಂಗ ಉತ್ತಮವಾಗಿ ಬೆಳವಣಿಗೆ ಕಾಣುತ್ತಿದ್ದು, ಮುಂದೆ ತುಳುಸಿನಿಮಾಗಳಲ್ಲಿ ಗೆಸ್ಟ್ ರೋಲ್ ಸಿಕ್ಕಿದ್ರೆ ಮಾಡುತ್ತೇನೆ,ಅಂತಾ ಪುನೀತ್ ಹೇಳಿದ್ರು. ಮಾತ್ರವಲ್ಲದೇ ತುಳುಭಾಷೆಯಲ್ಲೇ ಮಾತನಾಡುವ ಮೂಲಕ ಗಮನಸೆಳೆದರು. 

ಈಗಾಗಲೇ ಮಂಗಳೂರಿನ ಸುಚಿತ್ರಾ ಹಾಗೂ ಪ್ರಭಾತ್ ಚಿತ್ರಮಂದಿರದಲ್ಲಿ ನಟ ಸಾರ್ವಭೌಮ ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಹೀಗಾಗಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಚಿತ್ರಮಂದಿರ ವತಿಯಿಂದ ಸನ್ಮಾನಿಸಲಾಯ್ತು,ಈ ವೇಳೆಸುಚಿತ್ರಾ ಹಾಗೂ ಪ್ರಭಾತ್ ಚಿತ್ರಮಂದಿರ ಮಾಲಕರಾದ ಪ್ರಶಾಂತ್ ನಾರಾಯಣ್, ಸಿಇಓ ಪ್ರಭಾಕರ್ ರೆಡ್ಡಿ, ಮ್ಯಾನೇಜರ್ ವಿ.ಸುಬ್ಬುರಾಯ್ ಪೈ, ಫಿಲ್ಮ್ ಡಿಸ್ಟಿಬ್ಯೂಟರ್ ಹಾಗೂ ಧೀರಾಜ್ ಎಂಟರ್ಪ್ರೈಸ್ ಮಾಲಕರಾದ ಮೋಹನ್ ದಾಸ್ ಪೈ, ಧೀರಾಜ್ ಪೈ ಜೊತೆಯಲ್ಲಿ ಇದ್ದರು. ಇನ್ನು ಮಂಗಳೂರಲ್ಲೇ ಅತ್ಯುತ್ತಮ ಚಿತ್ರಮಂದಿರ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇಲ್ಲಿನ ಸೌಂಡ್ ಎಫೆಕ್ಟ್ ಅದ್ಬುತವಾಗಿದೆ ಅಂತಾ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ಪುನೀತ್ ಭೇಟಿ ನೀಡುವ ಬಗ್ಗೆ ಅಭಿಮಾನಿಗಳಿಗೆ ಮೊದಲೆ ತಿಳಿದಿದ್ದು ಈ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತನ್ನ ನೆಚ್ಚಿನ ನಟನನ್ನು ನೋಡಲು ಅಗಮಿಸಿದ್ರು ಹಾಗೂ ಸ್ಟಾರ್ ನಟನ ಜೊತೆಯಲ್ಲಿ ಸೆಲ್ಪಿ ತೆಗೆಯಲು ಮುಗಿಬಿದ್ರು.

Related posts

Leave a Reply

Your email address will not be published. Required fields are marked *