Header Ads
Breaking News

ಮಂಗಳೂರಿನಲ್ಲಿ ಅಂಚೆ ನೌಕರರ ಪ್ರತಿಭಟನೆ

ಅಂಚೆ ನೌಕರರಿಗೂ ೭ನೇ ವೇತನ ಆಯೋಗ ಜಾರಿ ಮಾಡುವಂತೆ ಕಳೆದ ಹನ್ನೊಂದು ದಿನಗಳಿಂದ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ ಪ್ರತಿಭಟನೆ ಇಂದು ಸಹ ಮುಂದುವರಿದಿದ್ದು 12ನೇ ದಿನಕ್ಕೆ ಕಾಲಿಟ್ಟಿದೆ.ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಮಾಡುತ್ತಿರುವ ಪ್ರತಿಭಟನೆ 12ನೇ ದಿನಕ್ಕೆ ಕಾಲಿರಿಸಿದೆ.

 

ಮಂಗಳೂರಿನ ಪಾಂಡೇಶ್ವರ ಪ್ರಧಾನ ಅಂಚೆ ಕಚೇರಿಯ ಎದುರು ಗ್ರಾಮೀಣ ಅಂಚೆ ನೌಕರರ ಸಂಘಟನೆ ವತಿಯಿಂದ ನೂರಾರು ನೌಕರರು ಪ್ರತಿಭಟನೆ ಮಾಡುತ್ತಿದ್ದು. ಈ ಪ್ರತಿಭಟನೆಗೆ ಕೇಂದ್ರ ಸರಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ವೇತನ ಆಯೋಗದ ಸಂಪೂರ್ಣ ವಾದ ವರದಿ ಅನುಷ್ಟಾನ ಆಗುವ ವರೆಗೂ ಪ್ರತಿಭಟನೆ ಮುಂದುವರೆಯುವ ಬಗ್ಗೆ ಸಂಘಟನೆ ಎಚ್ಚರಿಕೆ ನೀಡಿದೆ.

Related posts

Leave a Reply