Header Ads
Breaking News

ಮಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತಲೆಯೆತ್ತಲಿದೆ ‘ಅಜಂತಾ ಬ್ಯುಸಿನೆಸ್ ಸೆಂಟರ್’

ಪ್ರತಿಷ್ಠಿತ ಬಿಲ್ಡರ್ಸ್ ಸಂಸ್ಥೆಗಳಲ್ಲೊಂದಾದ ಬಿಆರ್ ಇನ್ಫ್ರಾ ಡೆವಲಪರ್ಸ್ ವತಿಯಿಂದ ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ಮಂಗಳೂರಿನ ಪ್ರಥಮ ಕಮರ್ಶಿಯಲ್ ಆಫೀಸ್ ಸ್ಪೇಸ್ ಅಜಂತ ಬ್ಯುಸಿನೆಸ್ ಸೆಂಟರ್ ಮಂಗಳೂರಿನ ಹೃದಯ ಭಾಗವಾದ ಬಿಜೈ ಕಾಪಿಕಾಡ್‍ನಲ್ಲಿ ನಿರ್ಮಾಣಗೊಳ್ಳಲಿದ್ದು, ಯೋಜನೆಯ ಲಾಂಚ್ ಹಾಗೂ ಬ್ರೌಷರ್ ಬಿಡುಗಡೆ ಸಮಾರಂಭ ನಡೆಯಿತು.ಹೌದು ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿ ದಾಪುಗಾಲಿಡುತ್ತಿರುವ ನಿರ್ಮಾಣ್ ಹೋಮ್ಸ್, ಪ್ರತಿಷ್ಠಿತ ಸಂಸ್ಥೆ ಬಿಆರ್ ಇನ್ಫ್ರಾ ಡೆವಲಪರ್ಸ್ ವತಿಯಿಂದ ಸಹಭಾಗಿತ್ವದಲ್ಲಿ ಮಂಗಳೂರಿನ ಪ್ರಥಮ ಬ್ಯುಸಿನೆಸ್ ಸೆಂಟರ್‍ನ್ನು ಸ್ಥಾಪಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಮಂಗಳೂರಿನ ಪ್ರಥಮ ಕಮರ್ಶಿಯಲ್ ಆಫೀಸ್ ಸ್ಪೇಸ್ ‘ಅಜಂತ ಬ್ಯೂಸಿನೆಸ್ ಸೆಂಟರ್’ ಮಂಗಳೂರಿನ ಬಿಜೈ ಕಾಪಿಕಾಡ್‍ನಲ್ಲಿ ನಿರ್ಮಾಣಗೊಳ್ಳಲಿದೆ. ಈ ಮಹತ್ತರ ಯೋಜನೆಯ ಲಾಂಚ್ ಹಾಗೂ ಬ್ರೌಷರ್ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು.

ಕಾರ್ಯಕ್ರಮವನ್ನು ಭಾರತ್ ಅಟೋ ಕಾರ್ಸ್ ಪ್ರೈವೆಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕರಾದ ಸುಧೀರ್ ಎಮ್ ಪೈ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ನೆರೆದಿದ್ದ ಗಣ್ಯರು ಮಂಗಳೂರಿನ ಪ್ರಥಮ ಕಮರ್ಶಿಯಲ್ ಆಫೀಸ್ ಸ್ಪೇಸ್ ಅಜಂತ ಬ್ಯೂಸಿನೆಸ್ ಸೆಂಟರ್‍ನ ಮಾಹಿತಿ ಬ್ರೋಷರನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಭಾರತ್ ಅಟೋ ಕಾರ್ಸ್ ಪ್ರೈವೆಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕರಾದ ಸುಧೀರ್ ಎಮ್ ಪೈ, ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ ಯಾಕೆಂದರೆ ಇದು ನನ್ನ ಬಾಲ್ಯ ಸ್ನೇಹಿತ ರಾಮ್‍ಮೋಹನ್ ಹೆಗ್ಡೆಯವರ ಮಹತ್ತರ ಯೋಜನೆಯಾಗಿದೆ. ಮಂಗಳೂರು ನಗರದಲ್ಲಿ ಅನೇಕ ಬಿಲ್ಡಿಂಗ್‍ಗಳಿವೆ. ಒಂದು ಕಪ್ಲೀಟ್ ಬ್ಯುಸಿನೆಸ್‍ಗಾಗಿ ಎಲ್ಲಾ ಬಗೆಯ ಆಫಿಸ್ ಫೆಸಿಲಿಟಿಗಳನ್ನು ಹೊಂದಿಕೊಂಡು ಪ್ರಥಮ ಬಾರಿಗೆ ಒಂದು ಬಿಲ್ದಿಂಗ್ ನಿರ್ಮಾಣಗೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ದೇಶದಾದ್ಯಂತ ಒಟ್ಟು 45 ಅಜಂತ ಬ್ಯೂಸಿನೆಸ್ ಸೆಂಟರ್‍ಗಳಿವೆ. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರಯುಕ್ತ ಅಕ್ಷಯಾ ಪಾತ್ರ ಪೌಂಡೇಷನ್‍ನ ಮೂಲಕ 45 ಮಕ್ಕಳಿಗೆ 1 ವರ್ಷಗಳ ಕಾಲ ಉಚಿತ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಚೆಕ್‍ನ್ನು ಅಕ್ಷಯ ಪಾತ್ರ ಪೌಂಡೇಶನ್‍ನ ಪ್ರಮುಖರಾದ ಕಾರುಣ್ಯ ಸಾಗರದಾಸ ಸ್ವಾಮೀಜಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಕಾರುಣ್ಯ ಸಾಗರದಾಸ ಸ್ವಾಮೀಜಿ, ಅಕ್ಷಯ ಪಾತ್ರ ಯೋಜನೆ ಆರಂಭವಾದದ ಕುರಿತು ವಿವರಿಸಿದರು. 

ಬಳಿಕ ಮಂಗಳೂರು ಪಾಲಿಕೆಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ಮಂಗಳೂರು ನಗರ ಅತ್ಯಂತ ವೇಗವಾಗಿ ಬೆಳೆಯತ್ತಿದೆ. ಇಂತಹಾ ಸಂದರ್ಭದಲ್ಲಿ ಮಂಗಳೂರಿನ ಮುಖ್ಯ ಭಾಗದಿಂದ ಹೊರಭಾಗಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದ್ದೇವೆ. ನಮ್ಮ ಈ ಭಾಗ ಅಭಿವೃದ್ಧಿ ಕಂಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಶುಭಹಾರೈಸಿದರು.  

ಬಳಿಕ ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಮಾತನಾಡಿ, ನಗರ ಬೆಳೆಯುತ್ತಿದ್ದಂತೆ ನಗರದ ಬೇರೆ ಬೇರೆ ಪ್ರದೇಶಗಳು ಅಭಿವೃದ್ಧಿಯಾಗುತ್ತಾ ಬರುತ್ತಿದೆ. ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಲ್ಲಿ ಪಾರ್ಕಿಂಗ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಈ ಕಟ್ಟಡದಲ್ಲಿ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪರಿಸರ ಸ್ನೇಹಿ ಕಟ್ಟಡವಾಗಿ ಮೂಡಿಬರಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಬಳಿಕ ನಿರ್ಮಾಣ್ ಹೋಮ್ಸ್‍ನ ಪ್ರಮುಖರಾದ ಗುರುದತ್ ಶೆಣೈ ಮಾತನಾಡಿ, ಮಂಗಳೂರಿನ ಪ್ರಥಮ ಕಮರ್ಶಿಯಲ್ ಆಫೀಸ್ ಸ್ಪೇಸ್ ಅಜಂತ ಬ್ಯುಸಿನೆಸ್ ಸೆಂಟರ್‍ನ ಸಂಪೂರ್ಣ ರೂಪುರೇಷೆಯನ್ನು ವಿವರಿಸಿದರು. 

ಕಾರ್ಯಕ್ರಮದಲ್ಲಿ ಬಿಆರ್ ಇನ್‍ಫ್ರಾ ಡೆವಲಪರ್ಸ್‍ನ ಪಾಲುದಾರರಾದ ಭಾಸ್ಕರ್ ಗಡಿಯಾರ್ ಮತ್ತು ರಾಮ್‍ಮೋಹನ್ ಹೆಗ್ಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಂಗಳೂರಿನ ವ್ಯವಹಾರಸ್ಥರ ಬೇಡಿಕೆಯನ್ನು ಮನಗಂಡು ನಿರ್ಮಾಣ್ ಹೋಮ್ಸ್, ಬಿಆರ್ ಇನ್‍ಫ್ರಾ ಡೆವಲಪರ್ಸ್‍ನ ಸಹಯೋಗದಲ್ಲಿ ಮಂಗಳೂರಿನಲ್ಲಿ ಅಜಂತಾ ಬ್ಯುಸಿನೆಸ್ ಸೆಂಟರ್ ತಲೆಯೆತ್ತುತ್ತಿದೆ. ಕಟ್ಟಡವು ವಿಶಾಲವಾದ ವಿಸಿಟರ್ಸ್ ಲಾಂಜ್ ಜೊತೆಗೆ ರಿಸೆಪ್ಷನ್, ಸವಿಸ್ತಾರವಾದ ಟ್ರೈನಿಂಗ್ ಮತ್ತು ಕಾನ್ಫರೆನ್ಸ್ ಹಾಲ್, ಸ್ಟಾಫ್‍ಗಳ ವಿಶ್ರಾಂತಿಗಾಗಿ ಬ್ರೇಕೌಟ್ ಏರಿಯಾ, ಸುಸಜ್ಜಿತ ಪ್ಯಾಂಟ್ರಿ, ಕಾಮನ್ ಕಾನ್ಫರೆನ್ಸ್ ಮತ್ತು ಬೋರ್ಡ್ ರೂಂ, ವಿಶಾಲವಾದ ಕಾರಿಡಾರ್, ವಿಶಾಲವಾದ ವಿಸಿಟರ್ಸ್ ಪಾರ್ಕಿಂಗ್ ಲಾಟ್, ನೀರು ರಿಸೈಕ್ಲಿಂಗ್ ವ್ಯವಸ್ಥೆ, ಇತ್ಯಾದಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಈ ಮೂಲಕ ಮಂಗಳೂರಿಗೆ ಒಂದು ಉತ್ತಮ ಬ್ಯುಸಿನೆಸ್ ಸೆಂಟರ್ ಲಭಿಸಲಿದೆ.

Related posts

Leave a Reply

Your email address will not be published. Required fields are marked *