Header Ads
Header Ads
Breaking News

ಮಂಗಳೂರಿನಲ್ಲಿ ಎವರ್‍ಗ್ರೀನ್ ಮಿಸ್ ಆ್ಯಂಡ್ ಮಿಸಸ್ ಸ್ಪರ್ಧೆ: ಅಂತಿಮ ಸುತ್ತಿನ 24 ಸ್ಪರ್ಧಿಗಳಿಗೆ ತರಬೇತಿ

ಮಂಗಳೂರು: ರೇಗೋ ಈವೆಂಟ್ಸ್  ಪ್ರಸ್ತುತ ಪಡಿಸುವ ಎವರ್‍ಗ್ರೀನ್ ಮಿಸ್ ಆ್ಯಂಡ್ ಮಿಸಸ್ – 2018ರ ಅಂತಿಮ ಸುತ್ತಿನ 24 ಸ್ಪರ್ಧಿಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ನಾನಾ ಸ್ಪರ್ಧೆಯನ್ನ ಮಂಗಳೂರಲ್ಲಿ ಆಯೋಜಿಸಲಾಗಿತ್ತು.

ಮಂಗಳೂರಿನ ಮಾಯಾ ಇಂಟರ್ ನ್ಯಾಶನಲ್‍ನ ಹೋಟೆಲ್ ಸಭಾಂಗಣದಲ್ಲಿ ರೇಗೋ ಈವೆಂಟ್ಸ್ ಪ್ರಸ್ತುತ ಪಡಿಸುವ ಎವರ್‍ಗ್ರೀನ್ ಮಿಸ್ ಆ್ಯಂಡ್ ಮಿಸಸ್ – 2018ರ ಮಂಗಳೂರು ಅಂತಿಮ ಸುತ್ತಿನ 24 ಸ್ಪರ್ಧಿಗಳ ತರಭೇತಿ ನೀಡುವ ನಿಟ್ಟಿನಲ್ಲಿ ನಾನಾ ಸ್ಪರ್ಧೆಯನ್ನ ಆಯೋಜಿಸಿದ್ದು, ಟೋಸ್ಟ್ ಮಾಸ್ಟರ್ ವತಿಯಿಂದ ನಾನಾ ತರಬೇತಿಯನ್ನ ನೀಡಲಾಯ್ತು.

ಸ್ಪರ್ಧೇಯನ್ನು ಟೋಸ್ಟ್ ಮಾಸ್ಟರ್ ದಿವ್ಯಶ್ರೀ ಗಟ್ಟಿ ನಡೆಸಿಕೊಟ್ಟರು. ತೀರ್ಪುಗಾರರಾಗಿ ಟೋಸ್ಟ್ ಮಾಸ್ಟರ್‍ನ ಬ್ರೈನ್ ಫೆರ್ನಾಂಡೀಸ್, ಸುಕನ್ಯರಾವ್, ಪ್ರತಿಭಾ ನಂಬಿಯಾರ್, ಸಜಿತಾ ನಂದಗೋಪಾಲ್, ವೈಯೋನಿಲ್ ಡಿಸೋಜಾ ಭಾಗವಹಿಸಿದ್ರು. ಮಾತ್ರವಲ್ಲದೇ ಸ್ಪರ್ಧಿಗಳಿಗೆ ಫ್ಯಾಶನ್ ಕೊರಿಯೋಗ್ರಫಿಯನ್ನು  ತರಬೇತುದಾರಾದ ವರ್ಧನ್, ಸರಿತಾ, ಜ್ಯಾಸ್ಮಿನ್ ನಡೆಸಿಕೊಟ್ಟರು.

ಈ ವೇಳೆ ರೇಗೋ ಈವೆಂಟ್ಸ್  ಪ್ರೈವೆಟ್ ಲಿಮಿಟೆಡ್‍ನ ಡೈರೆಕ್ಟರ್ ಜೋಯ್ಸ್ ರೇಗೋ, ಪ್ರಸಾದ್ ಕೊಂಚಾಡಿ, ಭೂಷಣ್ ಕುಲಾಲ್ , ಶರ್ಮಿಳಾ , ಬಾಸಿಲ್ ಗುಡ್ವಿನೋ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಮಿಸ್ ಆ್ಯಂಡ್ ಮಿಸಸ್ – 2018ರ ಅಂತಿಮ ಸುತ್ತಿನ 24 ಸ್ಪರ್ಧಿ ಗ್ರ್ಯಾಂಡ್ ಫಿನಾಲೆ ಮಂಗಳೂರಿನ ಬೋಳಾರ ಸಿಟಿ ಬೀಚ್‍ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

Related posts

Leave a Reply