Header Ads
Breaking News

ಮಂಗಳೂರಿನಲ್ಲಿ ಕಂಕಣ ಸೂರ್ಯಗ್ರಹಣ ಗೋಚರ : ಪಾದುವ ಕಾಲೇಜಿನಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ

ಸೂರ್ಯಗ್ರಹಣವು ಇಂದು ಬೆಳಗ್ಗೆ ೮:೦೪ರಿಂದ ಆರಂಭಗೊಂಡಿದ್ದು, ಮಂಗಳೂರು ಸೇರಿದಂತೆ ವಿವಿಧೆಡೆ ಖಗೋಳಾಸಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮಸೂರ, ದೂರದರ್ಶಕ, ಸೌರ ಕನ್ನಡಕಗಳ ನೆರವಿನಿಂದ ಇದನ್ನು ವೀಕ್ಷಿಸಿದ್ದಾರೆ.

ನಗರದ ಪಾದುವ ಕಾಲೇಜಿನಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಲಿಸ್ಕೋಪ್ ಮೂಲಕ ಕಾಲೇಜಿನ ಕೊಠಡಿಯಲ್ಲಿ ಬೃಹತ್ ಪರದೆಯ ಮೇಲೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಗ್ರಹಣವನ್ನು ವೀಕ್ಷಿಸಿದರು. ಮಕ್ಕಳು ವಿಶೇಷ ಕನ್ನಡಕದ ಮೂಲಕ ಕಂಕಣ ಗ್ರಹಣ ವೀಕ್ಷಿಸಿದರು. ಉಳಿದಂತೆ ಪಣಂಬೂರು ಬೀಚ್‌ನಲ್ಲೂ ಕೆಲವರು ಗ್ರಹಣ ವೀಕ್ಷಣೆ ಮಾಡಿದರು.

Related posts

Leave a Reply

Your email address will not be published. Required fields are marked *