Header Ads
Header Ads
Header Ads
Breaking News

ಮಂಗಳೂರಿನಲ್ಲಿ ಕಾಂಗ್ರೆಸ್ ಮನೆ ಮನೆಗೆ ಅಭಿಯಾನ ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಾಥ್

ಮಂಗಳೂರಿನಲ್ಲಿ ನಡೆದ  ಕಾಂಗ್ರೆಸ್ ಮನೆ ಮನೆಗೆ ಭೇಟಿ ಅಭಿಯಾನ ಕ್ಕೆ ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಸಾಥ್ ನೀಡಿದ್ದಾರೆ..ಮಂಗಳೂರಿನ ಕಾವೂರು ಜಂಕ್ಷನ್ ಬಳಿ ವೇಣುಗೋಪಾಲ್ ರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ಯುಟಿ ಖಾದರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು..ನಗರದ ಆಕಾಶಭವನದಲ್ಲಿ ಮನೆ ಮನೆ ಅಭಿಯಾನಕ್ಕೆ ಕಾಂಗ್ರೆಸ್ ಸಿದ್ದತೆ ಮಾಡಿದ್ರೆ,ಕೆ ಸಿ ವೇಣುಗೋಪಾಲ್ ಜೊತೆಗಿದ್ದ ನಾಯಕರು ಮಾತ್ರ ಮಾಹಿತಿಯ ಕೊರತೆಯಿಂದ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ವೇಣುಗೋಪಾಲ್ ರನ್ನು ಕರೆದುಕೊಂಡು ಹೋಗಿ ಮುಜುಗರಕ್ಕೆಗೀಡಾಗಿದ್ದಾರೆ.

ಮನೆ ಮನೆಗೆ ಭೇಟಿ ಸಂಧರ್ಭದಲ್ಲಿ ಬಡಕುಟುಂಬವೊಂದು ತಮಗಿನ್ನೂ ನಿವೇಶನ ಮಾಡಿಕೊಡದ ಬಗ್ಗೆ ಸರ್ಕಾರದ ವಿರುದ್ದ ಕೆಸಿ ವೇಣುಗೋಪಾಲ್ ಜೊತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ..ಈ ಸಂಧರ್ಭದಲ್ಲಿ ಕ್ಷೇತ್ರದ ಶಾಸಕ ಮೊಯಿದ್ದೀನ್ ಭಾವರನ್ನು ತರಾಟೆಗೆ ತೆಗೆದುಕೊಂಡ ವೇಣುಗೋಪಾಲ್ ತಕ್ಷಣ ಮನೆ ನಿರ್ಮಿಸಿಕೊಡಲು ಸೂಚನೆ ನೀಡಿದ್ದಾರೆ..ಅಲ್ಲದೆ ಬಡಕುಟುಂಬಕ್ಕೆ ತನ್ನ ದೂರವಾಣಿ ನಂಬರ್ ಬರೆದುಕೊಟ್ಟ ವೇಣುಗೋಪಾಲ್ ಶಾಸಕರು ಮನವಿಗೆ ಸ್ಪಂದಿಸದಿದ್ದರೆ ಕರೆ ಮಾಡುವಂತೆ ಸೂಚಿಸಿದ್ದಾರೆ…ಕೆಸಿ ವೇಣುಗೋಪಾಲ್ ಭೇಟಿ ಕೊಟ್ಟ ಬಹುತೇಕ ಮನೆಯವರು ಸರ್ಕಾರದ ಯೋಜನೆ ತಮಗಿನ್ನೂ ತಲುಪಿಲ್ಲ ಎಂದು ಹೇಳಿದ್ದು ಕಾಂಗ್ರೆಸ್ ಮುಖಂಡರು ತೀವ್ರ ಮುಖಭಂಗ ಅನುಭವಿಸುವಂತಾಯಿತು

Related posts

Leave a Reply