Header Ads
Header Ads
Breaking News

ಮಂಗಳೂರಿನಲ್ಲಿ “ಕಾರ್ಗಿಲ್ ವಿಜಯ್ ದಿವಸ್” ಆಚರಣೆ.

ಕಾರ್ಗಿಲ್ ಯುದ್ಧದಲ್ಲಿ ತಮ್ಮ ಆಮೂಲ್ಯ ಜೀವ ಬಲಿದಾನ ನೀಡಿ, ದೇಶ ರಕ್ಷಣೆ ಮಾಡಿದ ಭಾರತೀಯ ವೀರ ಯೋಧರ ನೆನಪಿನಲ್ಲಿ ಜನ ಪುಪ್ಪನಮನ ಸಲ್ಲಿಸಿ, ಮೊಂಬತ್ತಿ ಹಚ್ಚಿ ನಮಿಸಿದರು.ನಗರದ ಕದ್ರಿ ಪಾರ್ಕ್ ಬಳಿಯ ಹುತಾತ್ಮರ ಸ್ಮಾರಕದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ ವತಿಯಿಂದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಾಜಿ ಸೈನಿಕರು, ಸಾರ್ವಜನಿಕರು ಸೇರಿ ಹುತಾತ್ಮರ ಸ್ಮಾರಕ ದಲ್ಲಿ ಪುಪ್ಪನಮನ ಸಲ್ಲಿಸಿದರು. ಮಾಜಿ ಸೈನಿಕರ ಸಂಘದ ನಿಕಟಪೂರ್ವ ಅಧ್ಯಕ್ಷ ನಿಟ್ಟೆ ಗುತ್ತು ಶರತ್ ಭಂಡಾರಿ,ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿಜಯನಾಥ್ ವಿಠಲ ಶೆಟ್ಟಿ, ಗೃಹರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ಡಾ.ಮುರಳೀ ಮೋಹನ್ ಚೂಂತಾರು ಮೊದಲಾದವರು ಭಾಗಿಯಾಗಿದ್ದರು.

Related posts

Leave a Reply