Header Ads
Breaking News

ಮಂಗಳೂರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ವದಂತಿಗಳನ್ನು ಹರಡಬೇಡಿ : ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸೂಚನೆ

ಕೊರೊನಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಕಟ್ಟೆಚ್ಚರ ಇರುವ ಹಿನ್ನೆಲೆಯಲ್ಲಿ ನವ ಮಂಗಳೂರು ಬಂದರಿಗೆ ಮಂಗಳವಾರ ಮುಂಬಯಿಯಿಂದ ಆಗಮಿಸಿದ ಪ್ರವಾಸಿ ಹಡಗಿನ ಯಾನಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಇದಕ್ಕಾಗಿ ವಿಶೇಷ ತಪಾಸಣಾ ಘಟಕ ತೆರೆಯಲಾಗಿದೆ.

ನವಮಂಗಳೂರು ಬಂದರಿಗೆ ಈ ಸಾಲಿನಲ್ಲಿ ಆಗಮಿಸಿದ 12ನೇ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ. 1,800 ವಿದೇಶಿ ಪ್ರವಾಸಿಗರು ಹಾಗೂ 786 ಸಿಬಂದಿ ಅದರಲ್ಲಿದ್ದಾರೆ. ನಗರದ ಶಾಪಿಂಗ್ ಮಾಲ್, ಪ್ರೇಕ್ಷಣೀಯ ಸ್ಥಳಗಳನ್ನು ವಿದೇಶಿ ಪ್ರವಾಸಿಗರು ಸಂದರ್ಶಿಸಿದರು. ಹಡಗು ಬಳಿಕ ಕೊಚ್ಚಿಗೆ ಪ್ರಯಾಣ ಬೆಳೆಸಿತು.

ನೆರೆಯ ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮುಂಜಾಗ್ರತ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಪ್ರಕರಣ ಪತ್ತೆಯಾಗಿಲ್ಲ, ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.ಜ್ವರ, ತಲೆನೋವಿಗೆ ಚಿಕಿತ್ಸೆ ಪಡೆಯಲು ಸೋಮವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಫಿಲಿಪ್ಪೀನ್ಸ್‍ನ ದಂಪತಿ ಚೇತರಿಸಿಕೊಳ್ಳುತ್ತಿದ್ದಾರೆ. ಶೀತ, ತಲೆನೋವಿಗೆ ದಾಖಲಾಗಿದ್ದ ಕೇರಳ ಮೂಲದ ಜಪಾನ್ ವಿದ್ಯಾರ್ಥಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರಿಗೂ ಸಾಮಾನ್ಯ ಶೀತ, ಜ್ವರ, ತಲೆನೋವು ಕಾಣಿಸಿಕೊಂಡಿತ್ತು. ಯಾವುದೇ ಕಾರಣಕ್ಕೂ ಅನಗತ್ಯ ವದಂತಿಗಳನ್ನು ಹರಡಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *