Header Ads
Header Ads
Header Ads
Breaking News

ಮಂಗಳೂರಿನಲ್ಲಿ ಕ್ರಿಸ್‌ಮಸ್ ಸಂಭ್ರಮ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆ ಮಂಗಳೂರಿನಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ಭಾನುವಾರ ರಾತ್ರಿಯಿಂದಲೇ ಚಾಲನೆ ಸಿಕ್ಕಿದೆ.

ಮಧ್ಯರಾತ್ರಿಯಲ್ಲಿ ಏಸುವಿನ ಜನನ ಹಿನ್ನೆಲೆಯಲ್ಲಿ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಪ್ರಾರ್ಥನೆಗಳು ನಡೆದವು. ಕ್ರಿಸ್‌ಮಸ್ ಜಾಗರಣಯನ್ನು ಆಚರಿಸಿದರು. ಚರ್ಚ್‌ಗಳು ವರ್ಣಮಯ ದೀಪಗಳಿಂದ ಜಗಮಗಿಸಿದರೆ ಸಮುದಾಯದವರ ಮನೆ ಆವರಣದಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಮರಗಳಲ್ಲಿ ಮನೆಗಳ ಮೂಲೆಗಳಲ್ಲಿ ವಿವಿಧ ಆಕಾರದ ಕ್ರಿಸ್‌ಮಸ್ ಸ್ಟಾರ್ ದೀಪಗಳು ಸಂಭ್ರಮಕ್ಕೆ ಹೆಚ್ಚಿನ ಮೆರಗು ನೀಡಿದೆ. ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು. ಕ್ರಿಸ್‌ಮಸ್ ಗೀತೆಗಳನ್ನು ಹಾಡಲಾಯಿತು.
ಮಂಗಳೂರಿನ ರೋಜಾರಿಯೋ ಕೆಥೆಡ್ರಲ್‌ನಲ್ಲಿ ರಾತ್ರಿ ನಡೆದ ಸಂಭ್ರಮದ ಬಲಿಪೂಜೆಯಲ್ಲಿ ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿ’ಸೋಜ ವರು ಸಂದೇಶ ನೀಡಿದರು. ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರು ಡೆನ್ನಿಸ್ ಮೋರಾಸ್ ಪ್ರಭು, ಕೆಥೆಡ್ರಲ್ ಪ್ರಧಾನ ಗುರು ಫಾ. ಜೆ.ಬಿ. ಕ್ರಾಸ್ತಾ, ಮತ್ತು ಇತರ ಗುರುಗಳು ಪಾಲ್ಗೊಂಡಿದ್ದರು. ಬಲಿಪೂಜೆಯ ಬಳಿಕ ಕ್ರೈಸ್ತ ಬಾಂಧವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Related posts

Leave a Reply