Header Ads
Header Ads
Breaking News

ಮಂಗಳೂರಿನಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವಜನ ಒಕ್ಕೂಟ ಇವರ ಆಶ್ರಯದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಇಂದು ಬೆಳಗ್ಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು.ಕ್ರಿಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಚಾಲನೆಯನ್ನು ನೀಡಿದರು ನಂತರ ಮಾತನಾಡಿದ ಅವರು, ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿ ಮುಂದಿನ ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದ ಕ್ರಿಡಾಕೂಡದಲ್ಲಿ ಭಾಗವಹಿಸುವಂತಾಗ ಬೇಕು ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ನಳೀನ್ ಕುಮಾರು ಕಟೀಲ್‌ರವರು, ನಾಡ ಹಬ್ಬ ದಸರಾದ ಜೊತೆಗೆ ಕ್ರಿಡಾಕೂಟವನ್ನು ಆಯೋಜಿಸತ್ತಾ ಬರುತ್ತಿರುವುದು ನಮ್ಮ ಪರಂಪರೆ, ಕ್ರಿಡಾ ಪ್ರತಿಭೆಗಳನ್ನು ಅರಳಿಸುವಂತಹ ಕೆಲಸ ದಸರಾದ ಹೆಸರಿನಲ್ಲಿ ಈ ಹಿಂದೆ ಮೈಸೂರಿನಲ್ಲಿ ನಡೆಯುತ್ತಿತ್ತು. ಆದರೆ ಇದೀಗ ರಾಜ್ಯ ಸರಕಾರದ ಹೆಸರಿನಲ್ಲಿ ಹಳ್ಳಿ ಹಳ್ಳಿಯಲ್ಲಿ ನಡೆಯುವ ಗ್ರಾಮೀಣ ಕ್ರೀಡಾಕೂಟದ ಕ್ರೀಡಾಳುಗಳನ್ನು ಸೇರಿಸಿ ದಸರಾ ಕ್ರೀಡಾಕೂಟ ನಡೆಯುತ್ತಿದೆ ಎಂದರು.ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತಿಚಿನ ದಿನಗಳಲಲ್ಲಿ ಕ್ರೀಡಾಕೂಟಕ್ಕೆ ಮನ್ನಣೆಗಳು ದೊರಕುತ್ತಿದ್ದು. ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ, ಹೋಗುವಂತಹ ಅವಕಾಶಗಳಿರುವುದರಿಂದ ಜಿಲ್ಲಾಡಳಿತ ಅವಕಾಶಗಳನ್ನು ನೀಡುತ್ತಾ ಕ್ರೀಡಾ ಪಡುಗಳಿಗೆ ತಮ್ಮ ಪ್ರತಿಭೆಗಳನ್ನು ತೋರಿಸುವುದಕ್ಕೆ ಸಹಕರಿಸುತ್ತಿದೆ ಎಂದರು.

Related posts

Leave a Reply