Header Ads
Header Ads
Breaking News

ಮಂಗಳೂರಿನಲ್ಲಿ ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಮಂಗಳೂರು ನಗರದಲ್ಲಿ ಇಂದಿನಿಂದ ನವರಾತ್ರಿ ಹಬ್ಬದ ಸಡಗರ ಸಂಭ್ರಮ. ಇಂದು ಕುದ್ರೋಳಿ ಕ್ಷೇತ್ರದಲ್ಲಿ ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.ಕುದ್ರೋಳಿ ಶ್ರೀ ಗೋಕರ್ಣನಾಥನ ಸನ್ನಿಧಿಯಲ್ಲಿ ಗಣಪತಿ ಸೇರಿದಂತೆ ನವದುರ್ಗೆಯರ ಸಹಿತ ಶಾರದೆ ದೇವಿಯ ಪ್ರತಿಷ್ಠಾಪನೆ ನಡೆಯಿತು. ಗೋಕರ್ಣನಾಥ ಸನ್ನಿಧಿಯಲ್ಲಿ ಕರ್ಣಾಟಕ ಬ್ಯಾಂಕ್ ಎಂ.ಡಿ. ಮಹಾಬಲೇಶ್ವರ್ ಅವರು ದೀಪ ಬೆಳಗಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಹತ್ತು ದಿನಗಳ ಕಾಲ ಮಂಗಳೂರು ದಸರಾ ನಡಯಲಿದ್ದು, ಶ್ರೀ ಗೋಕರ್ಣನಾಥ ಕ್ಷೇತ್ರದ ಅಂಗಳ ಎಲ್ಲಿ ನೋಡಿದರಲ್ಲಿ ಮೈನವಿರೇಳಿಸುವ ಬೆಳಕಿನ ಚಿತ್ತಾರ ಕಾಣಸಿಗುತ್ತಿದೆ.

Related posts

Leave a Reply