
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ರಸ್ತೆಗಿಳಿದು ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ನಗರದಾದ್ಯಂತ ಸಂಚರಿಸಿದ ಜಿಲ್ಲಾಧಿಕಾರಿಗಳು ಮಾಸ್ಕ್ ಹಾಕದೇ ಇರುವವರಿಗೆ ದಂಡ ವಿಧಿಸಿದ್ರು, ಜೊತೆಗೆ ಕೋವಿಡ್ ನಿಯಮ ಪಾಲಿಸದ ಅಂಗಡಿಗಳ ಪರವಾನಗಿಯನ್ನು ತಾತ್ಕಾಲಿಕವಾಗಿ ಸೀಝ್ ಮಾಡಲು ಆದೇಶಿಸಿದರು.
ಮಾಸ್ಕ್ ಹಾಕದಿರುವ ಪೆಟ್ರೋಲ್ ಬಂಕ್ ಸಿಬ್ಬಂದಿ ಜಿಲ್ಲಾಧಿಕಾರಿಗಳಿಗೆ ಮಾಸ್ಕ್ ಹಾಕೋದಿಲ್ಲ ಎಂದಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೂಡಾ ನಡೆಯಿತು. ಡಿಸಿಪಿ ಹರಿರಾಂ ಶಂಕರ್, ಡಿಹೆಚ್ಓ ರಾಮಚಂದ್ರ ಬಾಯರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.