Header Ads
Breaking News

ಮಂಗಳೂರಿನಲ್ಲಿ ನಡೆದ ಮಹಿಳೆಯ ಭೀಕರ ಹತ್ಯೆ ಪ್ರಕರಣ : ಆರೋಪಿ ದಂಪತಿಗಳ ಬಂಧನ

ಮಂಗಳೂರು ನಗರದ ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ (35) ಅವರನ್ನು ಬರ್ಬರವಾಗಿ ಕೊಲೆಗೈದ ಪ್ರಕರಣವನ್ನು ಮೂರೇ ದಿನಗಳಲ್ಲಿ ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಆರೋಪಿ ದಂಪತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅತ್ತಾವರ ನಿವಾಸಿಗಳಾದ ಜೋನಸ್ ಜೂಲಿನ್ ಸ್ಯಾಮ್ಸನ್ ಮತ್ತು ಆತನ ಪತ್ನಿ ವಿಕ್ಟೋರಿಯಾ ಮಥಾಯಸ್ ಎಂಬವರೇ ಈ ಬರ್ಬರ ಹತ್ಯಾ ಪ್ರಕರಣದ ರೂವಾರಿಗಳು.

ಆರೋಪಿಗಳ ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದರು. ಹಣಕಾಸು ವ್ಯವಹಾರದ ವೈಷಮ್ಯದಿಂದ ಕೊಲೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಲು ಹೋದ ವೇಳೆ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಪತ್ನಿ ಕೊಲೆಗೆ ಸಹಕಾರ ನೀಡಿರುವ ಆರೋಪವಿದ್ದು, ಅವರ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ಹೇಳಿದ್ರು. ಇದೇ ವೇಳೆ ಶ್ರೀಮತಿ ಶೆಟ್ಟಿಯವರ ಮೃತದೇಹದ ಕಾಲು ಕದ್ರಿ ಪಾರ್ಕ್‌ನ ಬಳಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಕೂಡಾ ಇದೇ ವೇಳೆ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *