Header Ads
Header Ads
Header Ads
Breaking News

ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣ : ಕಾಂಗ್ರೆಸ್ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ

ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕಾಂಗ್ರೆಸ್‌ನವರ ವಿರುದ್ಧ ವಾಗ್ದಾಳಿ ನಡೆಸಿದರು. ಶಾಂತಿಯುತ ಚಳುವಳಿ ವ್ಯಾಪ್ತಿ ಎಲ್ಲಿ ತನಕ ಬರುತ್ತದೆ? ಶಸ್ತ್ರಾಸ್ತ್ರ ಕೊಠಡಿಯ ಬಾಗಿಲು ಒಡೆದಿದ್ದು ಶಾಂತಿಯುತ ಪ್ರತಿಭಟನೆ ನಾ? ವ್ಯಾನ್‌ಗಳಲ್ಲಿ ಕಲ್ಲು ತಂದು ತೂರಾಟ ಮಾಡಿದ್ದು ಶಾಂತಿಯುತ ಪ್ರತಿಭಟನೆ ನಾ? ಠಾಣೆಗೆ ದಿಗ್ಭಂಧನ ಮಾಡೋದು ಶಾಂತಿಯುತ ಪ್ರತಿಭಟನೆ ನಾ? ನಿಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನೆ ಮಾಡಿ. ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ಸರಿನಾ. ಸಮಾಜವನ್ನು ತಪ್ಪು ದಾರಿಗೆ ತರಬೇಡಿ. ಒಲೈಸುವ ಭರದಲ್ಲಿ ಸಮರ್ಥನೆ ಮಾಡಬೇಡಿ. ಉದ್ರಿಕ್ರರ ಕೈಗೆ ಶಸ್ತ್ರ ಸಿಕ್ಕಿದ್ರೆ ಪರಿಣಾಮವನ್ನು ಯೋಚಿಸಿ ಎಂದು ಶಾಸಕ ಯು.ಟಿ ಖಾದರ್, ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದರು.

Related posts

Leave a Reply

Your email address will not be published. Required fields are marked *