Header Ads
Header Ads
Breaking News

ಮಂಗಳೂರಿನಲ್ಲಿ ನೇತ್ರದಾನದ ಜಾಗೃತಿ ಓಟ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ನೇತ್ರ ಚಿಕಿತ್ಸಾ ತಜ್ಞರನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲಾ ನೇತ್ರ ತಜ್ಞರ ಸೊಸೈಟಿಯ ವತಿಯಿಂದ ನೇತ್ರದಾನ ಜಾಗೃತಿ ಪಾಕ್ಷಿಕ ಅಂಗವಾಗಿ ನಗರದಲ್ಲಿ ಐದು ಕಿಲೋಮೀಟರ್ ಓಟ ಕಾರ್ಯಕ್ರಮ ನಡೆಯಿತು.


ಮಂಗಳೂರು ನಗರದ ಲಾಲ್‌ಭಾಗ್‌ನಿಂದ ನೆಹರೂ ಮೈದಾನದ ವರೆಗೆ ಜಾಗೃತಿ ಓಟ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ಮುಖ್ಯಸ್ಥರಾದ ಹರೀಶ್ ಬಾಳಿಗ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ನೇತ್ರದಾನದ ಬಗ್ಗೆ ಸಮಾಜದ ಬಹುತೇಕ ಜನರಲ್ಲಿ ತಪ್ಪು ಕಲ್ಪನೆ ಇದೆ. ಅದನ್ನು ಹೋಗಲಾಡಿಸಬೇಕಾಗಿದೆ ಎಂದು ಹೇಳಿದರು.
ಆನಂತರ ಕರ್ನಾಟಕ ನೇತ್ರತಜ್ಞರ ಸೊಸೈಟಿಯ ಅಧ್ಯಕ್ಷ ಡಾ. ಸಾಯಿ ಗಿರಿಧರ್ ಅವರು ಮಾತನಾಡಿ, ನೇತ್ರದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಗ್ರಾಮಗಳಿಗೆ ತೆರಳಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ನಗರದ ಪಾಲಿಕೆ ಕಚೇರಿಯಿಂದ ನೆಹರೂ ಮೈದಾನದ ವರೆಗೆ ೫ ಕಿಲೋಮೀಟರ್ ಜಾಗೃತಿ ಓಟ ಕಾರ್ಯಕ್ರಮ ನೇತ್ರದಾನ ಜಾಗೃತಿ ಓಟದಲ್ಲಿ ಭಾಗವಹಿಸಿದರಿಗೆ ಪ್ರಶಸ್ತಿಯನನು ನೀಡಲಾಯಿತು.
ಈ ಕಾರ್ಯಕ್ರಮವು ಎಂಆರ್‌ಪಿಎಲ್, ರೋಟರಿ ಇಂಟರ್ ನ್ಯಾಶನಲ್, ರೌಂಡ್‌ಟೇಬಲ್, ಸಮ್‌ವಿತ್ತಿ ಕ್ಯಾಪಿಕಲ್, ಆಭರಣ ಜ್ಯುವೆಲ್ಲರಸ್ಸ್, ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕೆಎಂಸಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಭಾರತ್ ಆಟೋಕಾರಸ್ ಸಹಿತ ನಗರದ ಎಲ್ಲಾ ಮೆಡಿಕಲ್ ಕಾಲೇಜುಗಳ ಸಹಯೋಗದೊಂದಿಗೆ ಜಾಗೃತಿ ಓಟ ನಡೆಯಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ನೇತ್ರ ತಜ್ಞರ ಸಂಘದ ಅಧ್ಯಕ್ಷರಾದ ಡಾ. ಸುಧೀರ್ ಹೆಗ್ಡೆ, ಡಾ. ಅಜಯ್ ಕುಡ್ವ, ಡಾ. ವಿಕ್ರಮ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply