Header Ads
Header Ads
Breaking News

ಮಂಗಳೂರಿನಲ್ಲಿ ನೈರುತ್ಯ ಶಿಕ್ಷಕರ ಪದವೀಧರ ಕ್ಷೇತ್ರದ ಚುನಾವಣೆ

ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯು ಬಿರುಸಿನಿಂದ ನಡೆಯುತ್ತಿದೆ. ನಗರದ ಹಂಪನಕಟ್ಟೆ ಯುನಿವರ್ಸಿಟಿ ಕಾಲೇಜಿನಲ್ಲಿ ೨ ಮತಗಟ್ಟೆಯ ಮೂಲಕ ಮತದಾನ ನಡೆಯುತ್ತಿದೆ.ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ ೨೩ ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ ೧೪ ಮತಗಟ್ಟೆ ಅಳವಡಿಸಲಾಗಿದೆ. ಇನ್ನು ನೈರುತ್ಯ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಜೆಡಿಎಸ್ ನಿಂದ ಅರುಣ್ ಕುಮಾರ್ , ಬಿಜೆಪಿಯಿಂದ ಅಯನೂರು ಮಂಜುನಾಥ್-ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ನಿಂದ ಎಸ್.ಪಿ. ದಿನೇಶ್ ಸೇರಿದಂತೆ ಪಕ್ಷೇತರ ಅಭ್ಯಥಿಗಳು ಸ್ಪರ್ದೆ ಮಾಡುತ್ತಿದ್ದಾರೆ. ಇತ್ತ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಕ್ಯಾಪ್ಟನ್. ಗಣೇಶ್ ಕಾರ್ಣಿಕ್-ಭಾರತೀಯ ಜನತಾ ಪಾರ್ಟಿ,ಜೆಡಿಎಸ್ ನಿಂದ ಎಸ್.ಎಲ್. ಬೋಜೆಗೌಡ ಹಾಗೂ ಕಾಂಗ್ರೆಸ್ ನಿಂದ ಕೆ.ಕೆ. ಮಂಜುನಾಥ ಕುಮಾರ್ ಸೇರಿದಂತೆ ಪಕ್ಷೇತರ ಅಭ್ಯರ್ಥಿ ಗಳು ಸ್ಪರ್ಧೆ ಮಾಡುತ್ತಿದ್ದಾರೆ. ಪೊಲೀಸ್ ಬಿಗಿಭದ್ರತೆ ಮೂಲಕ ಚುನಾವಣೆ ನಡೆಯುತ್ತಿದೆ.  

 

Related posts

Leave a Reply