Header Ads
Breaking News

ಮಂಗಳೂರಿನಲ್ಲಿ ಪುಂಡು ಪೋಕರಿಗಳ ಬೆಂಡೆತ್ತಲು ಸಜ್ಜಾಗಿದೆ ರಾಣಿ ಅಬ್ಬಕ್ಕ ಪಡೆ!

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮಂಗಳೂರು ನಗರದಲ್ಲೂ ರಾಣಿ ಅಬ್ಬಕ್ಕ ಮಹಿಳಾ ಗಸ್ತು ಪೊಲೀಸ್ ಪಡೆಗೆ ಚಾಲನೆ ಸಿಕ್ಕಿತು. ರಾಜ್ಯದ ವಿವಿಧ ಕಡೆಗಳಲ್ಲಿ ಈಗಾಗಲೇ ಚಾಲನೆ ಸಿಕ್ಕಿದ್ದು, ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನ ಮುಂಭಾಗದಲ್ಲಿ ರಾಣಿ ಅಬ್ಬಕ್ಕ ಪಡೆಗೆ ಮಂಗಳೂರು ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರು ಚಾಲನೆ ನೀಡಿದರು.

ಬೆಳಗಾವಿ ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆ, ಚಿತ್ರದುರ್ಗದ ಓಬವ್ವ ಪಡೆ ಮಾದರಿಯಲ್ಲಿ ಮಂಗಳೂರಿನಲ್ಲೂ ರಾಣಿ ಅಬ್ಬಕ್ಕ ಪಡೆ ಅಸ್ತಿತ್ವಕ್ಕೆ ಬಂತು. ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಚಾಲನೆ ನೀಡಿದರು.

ರಾಣಿ ಅಬ್ಬಕ್ಕ ಪಡೆಯಲ್ಲಿರುವ ಮಫ್ತಿ ಮಹಿಳಾ ಪೊಲೀಸರು ಶಾಲಾ ಕಾಲೇಜು, ಜನದಟ್ಟಣೆ ಪ್ರದೇಶಗಳು, ಬಸ್ ನಿಲ್ದಾಣ ಮುಂತಾದೆಡೆಗಳಲ್ಲಿ ಗಸ್ತು ತಿರುಗಲಿದ್ದಾರೆ. ಮಹಿಳೆಯರನ್ನು ಚುಡಾಯಿಸುವ, ಕೀಟಲೆ ಮಾಡುವ, ಅಶ್ಲೀಲ ಕಮೆಂಟ್, ಅಸಭ್ಯ ವರ್ತನೆ ಮಾಡುವವರನ್ನು ತಕ್ಷಣ ಹಿಡಿದು ತಕ್ಕ ಪಾಠ ಕಲಿಸುತ್ತಾರೆ. ಇದರ ಜತೆಗೆ ಮಹಿಳೆಯರಲ್ಲಿ ಜಾಗೃತಿಯನ್ನೂ ಮೂಡಿಸಲಿದ್ದಾರೆ.

Related posts

Leave a Reply

Your email address will not be published. Required fields are marked *