Header Ads
Header Ads
Breaking News

ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ, ಇಪ್ಪತ್ತಮೂರು ಪ್ರಕರಣಗಳನ್ನು ಎನ್‌ಐಎಗೆ ನೀಡಲು ಸಂಸದೆ ಕರಂದ್ಲಾಜೆ ಕರೆ


ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಮಂಗಳೂರು ಪುರಭವನದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಪ್ರಕರಣಗಳನ್ನು ತನಿಖೆಗೆ ನೀಡಲಿ. ರುದ್ರೇಶ್ ಪ್ರಕರಣ ಎನ್‌ಐಎಗೆ ನೀಡಿ ಆರೋಪಿಗಳ ಬಂಧನವಾಗಿದೆ. ಉಳಿದ ೨೩ ಇಂತಹ ಪ್ರಕರಣಗಳ ಆರೋಪಿಗಳ ಬಂಧವಾಗಿಲ್ಲ. ೨೩ ಪ್ರಕರಣಗಳನ್ನು ಎನ್‌ಐಎಗೆ ನೀಡಲಿ. ಅಲ್ಲದೆ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸಬೇಕು ಎಂದು ಹೆಳಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ನಳಿನ್‌ಕುಮಾರ್ ಕಟೀಲ್, ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts

Leave a Reply