Header Ads
Header Ads
Breaking News

ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಸ್ಥರ ಪ್ರತಿಭಟನೆ

ಬೀದಿಬದಿ ವ್ಯಾಪಾರಸ್ಥರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಟಿವಿಸಿ ಸಭೆ ಕರೆಯಲು ಒತ್ತಾಯಬೇಕೆಂದು ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನೇಣು ಹಗ್ಗ ಪ್ರದರ್ಶಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯ್ತು, ಬೀದಿಬದಿ ವ್ಯಾಪಾರಸ್ಥರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೆ , ಮಹಾನಗರ ಪಾಲಿಕೆಯು ಎತ್ತಂಗಡಿ ಮಾಡುವುದನ್ನ ತಡೆಯಬೇಕು. ಈ ಕೂಡಲೇ ಟೌನ್ ವೆಂಡಿಂಗ್ ಸಭೆಯನ್ನ ಅತೀ ಶೀಘ್ರದಲ್ಲಿ ಕರೆಯಬೇಕೆಂದು ಬೀದಿ ಬದಿ ವ್ಯಾಪಾರ ಸಂಘದ ಸಲಹೆಗಾರ ವಸಂತ ಆಚಾರಿ ಆಗ್ರಹಿಸಿದರು.ಈವೇಳೆ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply