Header Ads
Header Ads
Header Ads
Breaking News

ಮಂಗಳೂರಿನಲ್ಲಿ ಬೃಹತ್ ಆಧಾರ್ ಮೇಳಕ್ಕೆ ಚಾಲನೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನಿಂದ ಯೋಜನೆ ಸಂಸದ ನಳಿನ್ ಕುಮಾರ್ ಕಟೀಲ್‌ರಿಂದ ಚಾಲನೆ

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಿ‌ಎಸ್‌ಸಿ ಸಹಭಾಗಿತ್ವದೊಂದಿಗೆ ನಗರದ ಪಿವಿ‌ಎಸ್ ಕಲಾಕುಂಜದ ಬಳಿ ಇರುವ ಬೃಹತ್ ಆಧಾರ್ ಮೇಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ನಗರದ ಕಲಾಕುಂಜ ಸಮೀಪ ಇರುವ ಅಟಲ್ ಸೇವಾ ಕೇಂದ್ರದಲ್ಲಿ ಬೃಹತ್ ಆಧಾರ್ ಮೇಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ದೇಶದಲ್ಲಿ ಜನ ಆಧಾರ್ ಕಾರ್ಡ್ ಮಹತ್ವವನ್ನು ಅರಿತಿದ್ದಾರೆ. ಆನರ ಬದುಕಿನಲ್ಲಿ ಆಧಾರ್ ಕಾರ್ಡ್ ಬಹಳ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.


ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್, ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್ ಮಾತನಾಡಿ ಒಟ್ಟು ೫ ದಿವಸಗಳ ಕಾಲ ಈ ಆಧಾರ್ ಮೇಳ ನಡೆಯಲಿದ್ದು, ಸರಿಸುಮಾರು 4000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಈ ಸಂದರ್ಭ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನ ಹನುಮಂತ ಕಾಮತ್, ಬಿಜೆಪಿ ಮುಖಂಡ ನಾಗರಾಜ್ ಶೆಟ್ಟಿ, ರಾಜ್‌ಗೋಪಾಲ್ ರೈ, ಮೋನಪ್ಪ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply