Header Ads
Header Ads
Breaking News

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ಅಬಕಾರಿ ಡಿವೈಎಸ್‌ಪಿ ವಿನೋದ್ ಕುಮಾರ್ ಮನೆಗೆ ದಾಳಿ ಎಸಿಬಿ ಅಧಿಕಾರಿಗಳಿಂದ ದಾಖಲೆ ಪತ್ರಗಳ ಪರಶೀಲನೆ

ಮಂಗಳೂರಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ, ದಾಳಿ ನಡೆಸಿದೆ. ಉಡುಪಿ ಅಬಕಾರಿ ಡಿವೈಎಸ್ಪಿ ವಿನೋದ್ ಕುಮಾರ್‌ರ ಮಂಗಳೂರಿನ ಮನೆಗೆ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮಂಗಳೂರಿನ ಕುಂಟಿಕಾನದಲ್ಲಿರುವ ವಿನೋದ್‌ರ ಮನೆ ಹಾಗೂ ಉಡುಪಿ ಕಚೇರಿ ಮೇಲೆ ಇಂದು ಮುಂಜಾನೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸಿಬಿ ದಳದ ಅಧಿಕಾರಿಗಳು ಜಂಟಿಯಾಗಿ ಏಕಕಾಲದಲ್ಲಿ ದಾಳಿ ನಡೆಸಿದರು.

ವಿನೋದ್, ದಕ್ಷಿಣ ಕನ್ನಡ ಅಬಕಾರಿ ದಳದ ಪ್ರಭಾರ ಅಧೀಕ್ಷಕರಾಗಿದ್ದರು. ದಾಳಿ ಸಂದರ್ಭ ಅಪಾರ ಪ್ರಮಾಣದ ಅಕ್ರಮ ಆಸ್ತಿ, ಚಿನ್ನಾಭರಣಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಉಡುಪಿ ಬೈಂದೂರಿನಲ್ಲಿರುವ ವಿನೋದ್ ಅವರ ಮಾವನ ಮನೆಗೂ ಎಸಿಬಿ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಎಸಿಬಿ ಎಸ್ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆದಿದೆ. ವಿನೋದ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಎಸಿಬಿಗೆ ಸಾರ್ವಜನಿಕರಿಂದ ದೂರು ಬಂದಿತ್ತು.

Related posts

Leave a Reply