Header Ads
Header Ads
Header Ads
Breaking News

ಮಂಗಳೂರಿನಲ್ಲಿ ಭಾರೀ ಗಲಭೆ ಹಿನ್ನಲೆ: ಬಂಟ್ವಾಳದಲ್ಲಿ ಸ್ತಬ್ಧಗೊಂಡ ಜನ ಸಂಚಾರ ಹಾಗೂ ವಾಹನ ಸಂಚಾರ

ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ಉಂಟಾದ ಹಿಂಸಾಚಾರದಿಂದಾಗಿ ಶುಕ್ರವಾರ ಬಂಟ್ವಾಳವೂ ಸ್ತಬ್ದಗೊಂಡಿತು. ಜನ ಸಂಚಾರ ಹಾಗೂ ವಾಹನ ಸಂಚಾರ ವಿರಳವಾಗಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಖಾಸಗಿ ವಾಹನಗಳು ಸಂಚಾರ ಕಂಡು ಬಂತು. ಕಾಂಟ್ರಕ್ಟ್ ಕ್ಯಾರಿಯೇಜ್ ಹಾಗೂ ಸರ್ವಿಸ್ ಬಸ್ಸುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕೆಎಸ್‌ಆರ್‌ಟಿಸಿ ಬಸ್ಸುಗಳ ಸೇವೆ ಇತ್ತು. ರಿಕ್ಷಾ ಪಾರ್ಕಿಂಗ್‌ನಲ್ಲಿ ಬೆರಳೆಣಿಕೆಯ ರಿಕ್ಷಾಗಳು ಮಾತ್ರ ಕಂಡು ಬಂತು.ನಗರ ಪ್ರದೇಶದಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿದರೆ, ಆಸ್ಪತ್ರೆ, ಮೆಡಿಕಲ್, ಸರಕಾರಿ ಕಚೇರಿ, ಕೆಲ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಎಲ್ಲೆಡೆ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.  ಸದಾ ಪ್ರಯಾಣಿಕರಿಂದ ಗಿಜಿಗಿಡುತ್ತಿದ್ದ ಬಿ.ಸಿ.ರೋಡಿನ ಬಸ್ಸು ನಿಲ್ದಾಣ ಬಸ್ಸು ಹಾಗೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ವಾಹನ ಸಂಚಾರ ಸ್ಥಗಿತಗೊಳ್ಳುವ ಬಗ್ಗೆ ಮುನ್ಸೂಚನೆ ಇದ್ದ ಕಾರಣ ಜನರು ಮನೆ ಬಿಟ್ಟು ಬಂದಿಲ್ಲ.

Related posts

Leave a Reply

Your email address will not be published. Required fields are marked *