Header Ads
Header Ads
Breaking News

ಮಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಮಸಾಜ್ ಸೆಂಟರ್, ಸ್ಕಿಲ್ ಗೇಮ್ ಅಡ್ಡ, ಮೇಯರ್ ಮತ್ತು ಮನಪಾ ಅಧಿಕಾರಿಗಳಿಂದ ದೂರು ದಾಖಲು

ನಗರದಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಮಸಾಜ್ ಪಾರ್ಲರ್ ಹಾಗೂ ಸ್ಕಿಲ್‌ಗೇಮ್ ಸೆಂಟರ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ದಾಳಿ ನಡೆಸಿ, ಅಧಿಕಾರಿಗಳ ಮುಖೇನ ಬೀಗ ಹಾಕಿಸಿದ್ದು, ಅದನ್ನು ಮುರಿದು ಮತ್ತೆ ವ್ಯವಹಾರ ಆರಂಭಿಸಿರುವ ಸ್ಕಿಲ್‌ಗೇಮ್ ಮಾಲೀಕರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ನಾಲ್ಕು ಮಂದಿ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಇತ್ತಿಚೇಗಷ್ಟೆ ಮಂಗಳೂರು ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ಜು. ೬ ಮತ್ತು ಜು. ೧೧ರಂದು ದಾಳಿ ನಡೆಸಿದ್ದರು. ಅಧಿಕಾರಿಗಳು ಬೀಗ ಹಾಕಿದ್ದನ್ನು ಮುರಿದು ವ್ಯವಹಾರ ಆರಂಭಿಸಿದ ಮಾಲೀಕರ ವಿರುದ್ಧ ಪ್ರತಿಕ್ರಿಯೆ ನೀಡಿದ ಮೇಯರ್, ಸ್ಕಿಲ್‌ಗೇಮ್‌ಗೆ ಯಾವುದೇ ಕಾರಣಕ್ಕೂ ನಗರದಲ್ಲಿ ಅವಕಾಶ ನೀಡುವುದಿಲ್ಲ. ಇದಕ್ಕೆ ಯುವಕರು, ಕಾಲೇಜು ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ. ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಾನೇ ಸ್ವತಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಮನಪಾ ಅಧಿಕಾರಿಗಳು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಿದರು. ಸ್ಕಿಲ್‌ಗೇಮ್ ಕ್ಲಬ್ ವಿರುದ್ಧ ಜಾಮೀನು ರಹಿತ ಸೆಕ್ಷನ್ ೧೪೩,೧೪೭, ೩೫೩, ೪೪೮,೪೨೭,೧೪೯ನಡಿ ಪ್ರಕರಣ ದಾಖಲಿಸಲಾಗಿದೆ ಎಂದರು.

Related posts

Leave a Reply