Breaking News

ಮಂಗಳೂರಿನಲ್ಲಿ ಮಲೇರಿಯಾ ನಿವಾರಣಾ ರೂಪುರೇಖೆ ನೀತಿ, ಸಚಿವ ರಮಾನಾಥ ರೈರಿಂದ ಕಾರ್ಯಕ್ರಮ ಅನಾವರಣ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಮಲೇರಿಯ ನಿವಾರಣಾ ರೂಪುರೇಖೆ ಮತ್ತು ನೀತಿಗಳ ಅನಾವರಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಸಹಿತ ವಿಧಾನ ಪರಿಷತ್‌ನ ಮುಖ್ಯ ಸಚೇತಕರಾದ ಐವನ್ ಡಿಸೋಝಾ, ಮೇಯರ್ ಕವಿತಾ ಸನಿಲ್, ಶಾಸಕ ಜೆ. ಆರ್. ಲೋಬೋ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ಯರಾದ ಸುಭೋದ್ ಯಾದವ್, ಜಿಲ್ಲಾಧಿಕಾರಿ ಕೆ. ಜಿ. ಜಗದೀಶ್ ಸಹಿತ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಲೇರಿಯಾ ನಿವಾರಣಾ ನೀತಿಯ ರೂಪುರೇಖೆಗಳನ್ನು ಉಸ್ತುವಾರಿ ಸಚಿವರು ಅನಾವರಣಗೊಳಿಸಿದರು. ಜೊತೆಗೆ ಮಲೇರಿಯಾ ಕುರಿತ ಮಾಹಿತಿ ಇರುವ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

Related posts

Leave a Reply