Header Ads
Breaking News

ಮಂಗಳೂರಿನಲ್ಲಿ ಮುಂದುವರಿದ ಕರ್ಫ್ಯೂ : ಜನಸಂಖ್ಯೆ ವಿರಳ, ವಾಹನ ಸಂಚಾರಕ್ಕೂ ಅನುಮತಿ ಇಲ್ಲ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎರಡು ದಿನಗಳ ಹಿಂದೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಿದ ಕರ್ಫ್ಯೂ ಮುಂದುವರಿಸಿದೆ. ಇನ್ನು ಜನಸಾಮಾನ್ಯರಿಗೆ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಇಂದು ಮುಂಜಾನೆ ೬ಗಂಟೆಯಿಂದ ೮ಗಂಟೆಯವರೆಗೆ ಕರ್ಫ್ಯೂವನ್ನು ಸಡಿಲಿಸಲಾಗಿತ್ತು. ಬೆಳಗ್ಗೆ ೮ಗಂಟೆಯ ನಂತ್ರ ಮರು ಕರ್ಫ್ಯೂ ಹೇರಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತೆ ಸೂಚಿಸಿದ್ದಾರೆ. ಮರು ಕರ್ಫ್ಯೂ ಹೇರಿದ ಬಳಿಕವೂ ರೆಸ್ತೆಯಲ್ಲಿ ಜನರು ಓಡಾಡುತ್ತಿದ್ದ ಕಾರಣ ಪೊಲೀಸರು ಜನರಿಗೆ ಎಚ್ಚರಿಕೆಯನ್ನು ನೀಡಿ ವಾಪಸ್ ಕಳಿಸಿದ್ದಾರೆ. ಕರ್ಫ್ಯೂ ಜಾರಿ ಇರೋ ಹಿನ್ನೆಲಯಲ್ಲಿ ಬಸ್ ಸಂಚಾರಕ್ಕೆ ಕೂಡಾ ಅನುಮತಿಯನ್ನು ನಿಡಲಾಗಿಲ್ಲ. ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ. ಮದ್ಯ ಮಾರಾಟವನ್ನು ಜಿಲ್ಲೆಯಲ್ಲಿ ನಿಷೇಧಿಸಿ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಅವರು ಆದೇಶಿದಿದ್ದಾರೆ.

Related posts

Leave a Reply

Your email address will not be published. Required fields are marked *