Header Ads
Header Ads
Header Ads
Breaking News

ಮಂಗಳೂರಿನಲ್ಲಿ ವಕ್ಫ್ ಸಮಾವೇಶ ಸೆ.23 ರಂದು ನಡೆಯಲಿರುವ ಸಮಾವೇಶ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್ ಸಂಶುದ್ದೀನ್ ಹೇಳಿಕೆ

ದ.ಕ ಮತ್ತು ಉಡುಪಿ ಜಿಲ್ಲೆಗಳ ವಕ್ಫ್ ಸಂಸ್ಥೆಗಳ ಮುತಾವಲ್ಲಿಗಳ ಸಮಾವೇಶವು ಸೆ.23 ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರಾಗಿ ಸರಕಾರದಿಂದ ನೇಮಕಾತಿ ಹೊಂದಿದ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ವಿಭಾಗದ ಸಂಚಾಲಕ ಹಾಗೂ ನ.ಪಂ. ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಮಾಹಿತಿ ನೀಡಿದರು.

ಸುಳ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸಮಾಜಿಕ, ಆರ್ಥಿಕ ಕ್ಷೇಯೋಭಿವೃದ್ಧಿಗಾಗಿ ವಕ್ಫ್ ಕೌನ್ಸಿಲ್ ಸ್ಥಾಪನೆಗೊಂಡಿದ್ದು, ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಹಿತದೃಷ್ಠಿಯಿಂದ ಕಾರ್ಯಾಚರಿಸುತ್ತಿದೆ ಎಂದ ಅವರು, ಮೊಗರ್ಪಣೆ ಜುಮ್ಮಾ ಮಸೀದಿ ಅದೀನದಲ್ಲಿ ಶಾದಿಮಹಲ್ ನಿರ್ಮಾಣಕ್ಕಾಗಿ ರೂ.1 ಕೋಟಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ದುಗಲಡ್ಕ ದರ್ಗಾ ಶರೀಪ್ ಯಾತ್ರಿಗಳ ಮತ್ತು ಮಹಿಳೆಯರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ರೂ.50 ಲಕ್ಷ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಹಂತದಲ್ಲಿದೆ. ಸುಳ್ಯ ತಾಲೂಕುಗಳ ವಿವಿಧ ಮಸೀದಿಗಳಿಗೆ ರೂ.50 ಲಕ್ಷ ಅನುದಾನ ಈಗಾಗಲೇ ಮಂಜೂರಾತಿಯಾಗಿ ವಕ್ಫ್ ಬೋರ್ಡ್‌ಗೆ ಬಿಡುಗಡೆಗೊಂಡಿದೆ. ಈ ಸಾಲಿನಲ್ಲಿ ಸುಳ್ಯ ಮತ್ತು ಮಡಿಕೇರಿ ತಾಲೂಕುಗಳ ಮಸೀದಿಗಳಿಗೆ 50 ಲಕ್ಷ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು ವಿವರಿಸಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಜಾಲ್ಸೂರು ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ, ಶಾಫಿ ಕುತ್ತಮೊಟ್ಟೆ, ನಝೀರ್ ಶಾಂತಿನಗರ, ಧರ್ಮಪಾಲ ಕೊಯಿಂಗಾಜೆ, ಉಪಸ್ಥಿತರಿದ್ದರು.

ವರದಿ: ಪದ್ಮನಾಭ ಸುಳ್ಯ

Related posts

Leave a Reply