Header Ads
Breaking News

ಮಂಗಳೂರಿನಲ್ಲಿ ವಿಎಂ ಕಸ್ಟಮ್ಸ್ ವೀಲ್ ಕೇರ್ ಸೆಂಟರ್ ಶುಭಾರಂಭ

 ತಮ್ಮ ವಾಹನಗಳು ಸದಾ ಸುಂದರವಾಗಿ ಕಾಣಿಸಬೇಕು. ಕಾರ್ಯಕ್ಷಮತೆಯೂ ಚೆನ್ನಾಗಿರಬೇಕು ಅಂತಾ ಎಲ್ಲಾ ವಾಹನಪ್ರಿಯರೂ ಬಯಸ್ತಾರೆ. ಅದರಲ್ಲೂ ಕಾರಿನ ವಿಚಾರಕ್ಕೆ ಬಂದ್ರೆ ನಮ್ಮ ಕಾರು ಅಟ್ರಾಕ್ಟಿವ್ ಆಗಿರಬೇಕು ಎನ್ನುವ ಕನಸು ಕಾರಿನ ಮಾಲಕರದ್ದು. ಇಂತಹವರ ಕನಸನ್ನು ನನಸಾಗಿಸಲು ಸುಸಜ್ಜಿತವಾಗಿ ತೆರೆದುಕೊಂಡಿದೆ ವಿಎಂ ಕಸ್ಟಮ್ಸ್ ವೀಲ್ ಕೇರ್ ಸೆಂಟರ್. ಹೌದು ಕಾರ್ ಆಕ್ಸೆಸರಿಗಳ ವಿಶಾಲ ಸಂಗ್ರಹದೊಂದಿಗೆ ವಿಎಂ ಕಸ್ಟಮ್ಸ್ ವೀಲ್ ಕೇರ್ ಸೆಂಟರ್ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯಲ್ಲಿ ಶುಭಾರಂಭಗೊಂಡಿದೆ.ಯಾವುದೇ ವಾಹನಗಳಿರಲಿ, ಅವುಗಳು ಅಂದವಾಗಿ ಕಾಣುವುದು ಅವುಗಳಿಗೆ ಅಳವಡಿಸುವ ಎಕ್ಸ್ಟ್ರಾ ಫಿಟಿಂಗ್ಸ್ ಮತ್ತು ಆಕರ್ಷಕ ಟೈರ್‌ಗಳಿಂದ. ಅಸಮರ್ಪಕ ರಸ್ತೆ, ಅವಿರತ ಚಾಲನೆ ಇತ್ಯಾದಿಗಳಿಂದ ವಾಹನಗಳು ಪದೇ ಪದೇ ಹಾನಿಗೊಳಗಾಗುತ್ತವೆ. ಇಂತಹ ವಾಹನಗಳ ಮಾಲಕರಿಗೆ ಸುಸಜ್ಜಿತವಾಗಿ ಸೇವೆ ಒದಗಿಸಲು ಸಜ್ಜಾಗಿದೆ ವಿ.ಎಂ. ಕಸ್ಟಮ್ಸ್ ವೀಲ್ ಕೇರ್ ಸೆಂಟರ್. ಹೌದು, ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆ ಪಕ್ಕದ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಸುಸಜ್ಜಿತ ವಿಎಂ ಕಸ್ಟಮ್ಸ್ ವೀಲ್ ಕೇರ್ ಸೆಂಟರ್ ಶುಭಾರಂಭಗೊಂಡಿದೆ.

ವಿಎಂ ಕಸ್ಟಮ್ಸ್ ಮಳಿಗೆಯನ್ನು ಜಿಬಿ ಬಿಲ್ಡರ್‍ಸ್‌ನ ಗಣೇಶ್ ಬಂಗೇರ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ವಿಎಂ ಕಸ್ಟಮ್ಸ್ ಕಾರ್ ಆಕ್ಸೆಸರೀಸ್‌ನ ಮಾಲಕ ವಿಶ್ವಾಸ್ ಮೊಯ್ಲಿಯವರು, ಕಳೆದ ನಾಲ್ಕೈದು ವರ್ಷಗಳಿಂದ ಸಂಸ್ಥೆಯು ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ಇದೀಗ ವಿಸ್ತೃತ ಮಳಿಗೆಯನ್ನು ಆರಂಭಿಸುವ ಮೂಲಕ ಇನ್ನಷ್ಟು ಉತ್ತಮ ಸೇವೆ ನೀಡಲು ಸಜ್ಜಾಗಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಾಧು ಮೊಯ್ಲಿಯವರು, ಸಂಸ್ಥೆಯು ಕ್ಲಪ್ತ ಸಮಯದಲ್ಲಿ ಗುಣಮಟ್ಟದ ಸೇವೆ ನೀಡುತ್ತಾ ಬಂದಿದೆ. ಮುಂದಕ್ಕೂ ನೀಡಲಿದೆ ಎಂದು ಹೇಳಿದರು. 

ನೂತನವಾಗಿ ಆರಂಭಗೊಂಡಿರುವ ವಿಎಂ ಕಸ್ಟಮ್ಸ್‌ನಲ್ಲಿ ವೀಲ್ ಕೇರ್‌ನ ಜೊತೆಗೆ ಕಾರಿಗೆ ಬೇಕಾದ ಎಲ್ಲಾ ಬಗೆಯ ಆಕ್ಸೆಸರಿಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. 3ಡಿ ವೀಲ್ ಅಲೈನ್‌ಮೆಂಟ್, ವೀಲ್ ಬ್ಯಾಲೆನ್ಸಿಂಗ್, ಟೈರ್ ಪಂಕ್ಚರ್ ಇತ್ಯಾದಿ ಸೌಲಭ್ಯಗಳಿವೆ. ವಿಶಾಲ ಶ್ರೇಣಿಯ ಕಾರ್ ಆಕ್ಸೆಸರಿಗಳ ಜೊತೆಗೆ ಅತ್ಯುತ್ತಮ ದರದಲ್ಲಿ ಕಸ್ಟಮೈಸೇಷನ್ ಸರ್ವೀಸ್ ಕೂಡ ಲಭ್ಯವಿದೆ.

Related posts

Leave a Reply

Your email address will not be published. Required fields are marked *