Header Ads
Header Ads
Breaking News

ಮಂಗಳೂರಿನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ, ಕರ್ನಾಟಕ ಬ್ಯಾಂಕ್, ರೆಡ್‌ಎಫ್‌ಎಮ್ ವಾಹನ ಜಾಥಾ


ಕರ್ನಾಟಕ ಬ್ಯಾಂಕ್ ಮತ್ತು ರೆಡ್‌ಎಫ್‌ಎಮ್ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹಮ್ಮಿಕೊಂಡ ವಾಹನ ಜಾಥಾ ನಡೆಯಿತು.
ಮಂಗಳೂರು ಪಂಪ್‌ವೆಲ್‌ನಲ್ಲಿರುವ ಕರ್ನಾಟಕ ಬ್ಯಾಂಕ್ ಕಚೇರಿ ಎದುರು ವಾಹನ ಜಾತಾಕ್ಕೆ ಕರ್ನಾಟಕ ಬ್ಯಾಂಕ್‌ನ ಮ್ಯಾನೇಜಿಂಗ್ ಡೆರೆಕ್ಟರ್ ಮತ್ತು ಸಿಇಒ ಮಹಾಬಲೇಶ್ವರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ರೆಡ್‌ಎಫ್‌ಎಮ್ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎಂದ ಅವರು ಇನ್ನು ಎರಡು ಮೂರು ವರ್ಷದಲ್ಲಿ ಮಂಗಳೂರು ತಂಬಾಕು ಮುಕ್ತ ನಗರ ಆಗಬೇಕು ಎಂದು ಹೇಳಿದರು.
ಅನಂತರ ಚೀಪ್ ಮ್ಯಾನೇಜರ್ ಶ್ರೀನಿವಾಸ್ ದೇಶಪಾಂಡೆ ಮಾತನಾಡಿ, ಅಂಕಿ ಅಂಶದ ಪ್ರಕಾರ ೨೦ ಲಕ್ಷ ಜನ ಅಕಾಲ ಮೃತ್ಯುಗೆ ತಂಬಾಕಿನಿಂದ ಒಳಗಾಗುತ್ತಾರೆ. ಅದರಲ್ಲೂ ಯುವ ಪೀಳಿಗೆಯವರು ಮೋಜಿಗೆಂದು ಆರಂಭ ಮಾಡುವ ಚಟ ಮಸಣಕ್ಕೆ ದಾರಿ ಮಾಡಿಕೊಡುತ್ತದೆ ಆದ್ದರಿಂದ ಇಂತಹ ಚಟಕ್ಕೆ ಒಳಗಾಗಬೇಡಿ ಎಂದು ಹೇಳಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‌ನ ಚೀಪ್ ಜನರಲ್ ಮ್ಯಾನೇಜರ್ ರಾಘವೇಂದ್ರ ಭಟ್. ಡೆಪ್ಯೂಟಿ ಜನರಲ್ ಮ್ಯಾನೇಜರ್ ರಾಜ್ ಬಿ. ಎಸ್. ರೆಡ್‌ಎಫ್‌ಎಮ್‌ನ ಸೀನಿಯರ್ ಹೆಡ್ ಯಶರಾಜ್, ಸ್ಟೇಷನ್ ಹೆಡ್ ಶೋಬಿತ್, ಆರ್. ನಯನ, ಆರ್‌ಜೆ ತ್ರಿಶೂಲ್, ಆರ್‌ಜೆ ಪ್ರಸನ್ನ, ಆರ್‌ಜೆ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply