Header Ads
Breaking News

ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಫೇಕ್ ವಿಸಾ ಏಜೆನ್ಸಿಗಳ ದಂಧೆ : ವಿದೇಶಿ ಉದ್ಯೋಗಕ್ಕೆ ಮಾರು ಹೋಗಿ ಮೋಸ ಹೋಗದಂತೆ ಎಚ್ಚರಿಕೆ

ದುಬೈ ಸೇರಿದಂತೆ ಅರಬ್ ದೇಶಗಳಿಗೆ ಹೋಗಿ ಕೋಟಿ ಕೋಟಿ ಹಣ ಸಂಪಾದಿಸಿದವರಲ್ಲಿ ಮಂಗಳೂರಿನವರೇ ಹೆಚ್ಚಾಗಿದ್ದು, ದೇಶ-ವಿದೇಶಗಳಲ್ಲಿ ಹೆಚ್ಚು ಸಂಪರ್ಕ ಹೊಂದಿರುವವರೂ ಕೂಡ ಮಂಗಳೂರಿಗರೇ. ಇನ್ನೂ ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹೋಗುವವರನ್ನೇ ಟಾರ್ಗೆಟ್ ಮಾಡಿ ಅಕ್ರಮ ದಂಧೆ ನಡೆಯುತ್ತಿದ್ದು. ಇಂತಹಾ ಅಕ್ರಮ ಏಜೆನ್ಸಿಗಳ ಕೋಟೆಯ ಮೇಲೆ ಪೊಲೀಸ್ರು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಅದೇನು ಅಂತೀರ ಇಲ್ಲಿದೆ. ಕಂಪ್ಲೀಟ್ ಸ್ಟೋರಿ….

ನಮ್ಮ ಮಂಗಳೂರಿಗೂ ದುಬೈ, ಕುವೈತ್ ಸೇರಿದಂತೆ ವಿವಿಧ ಅರಬ್ ಮತ್ತು ಗಲ್ಫ್ ಕಂಟ್ರಿಗಳಿಗೆ ಬಹಳ ನಂಟಿದೆ. ಮಂಗಳೂರಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಓಡಾಡುತ್ತಿರುವ ಹಣದ ಬಹುಪಾಲು ವಿದೇಶದಿಂದ ಸಂಪಾದಿಸಿದ್ದು. ಕರಾವಳಿಯಲ್ಲಿ ಹೆಚ್ಚಿನ ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ಹೋಗ್ತಾರೆ. ಅದರಲ್ಲೂ ಮಂಗಳೂರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕವೇ ನಿತ್ಯ ಸಾವಿರಾರು ಮಂದಿ ವಿದೇಶಕ್ಕೆ ಹೋಗ್ತಾರೆ. ಇವ್ರಲ್ಲಿ ಹಲವಾರು ಮಂದಿ ತಮ್ಮ ಕಾಂಟಾಕ್ಟ್ ಮೂಲಕ ಊರಿನ ಯಾರಿಗಾದ್ರೂ ಉದ್ಯೋಗ ಬೇಕಂದ್ರೆ ಎಂಪ್ಲಾಯ್ ವಿಸಾ ತೆಗಿಸಿಕೊಡ್ತಾರೆ. ಇಂತಹಾ ಉದ್ಯೋಗ ವೀಸಾ ಕೊಡಿಸುವ ವಿವಿಧ ಏಜೆನ್ಸಿಗಳು ಮಂಗಳೂರಲ್ಲಿವೆ. ಆದ್ರೆ ಇವುಗಳಲ್ಲಿ ಹಲವು ಏಜೆನ್ಸಿಗಳು ಫೇಕ್. ಮಂಗಳೂರಲ್ಲಿ ವಿದೇಶಾಂಗ ಸಚಿವಾಲಯದಿಂದ ಲೈಸೆನ್ಸ್ ಇಲ್ಲದ ಅದೆಷ್ಟೋ ಏಜೆನ್ಸಿಗಳು ವೀಸಾ ಕೊಟ್ಟು ಜನರನ್ನು ವಂಚಿಸುತ್ತಿರೋ ಘಟನೆ ಬೆಳಕಿಗೆ ಬಂದಿದೆ. ಅಂತಹ ಫೇಕ್ ಸಂಸ್ಥೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದೆ.

ಈ ಫೇಕ್ ಏಜೆನ್ಸಿಗಳ ಹಾವಳಿ ಕಂಡು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನೇತೃತ್ವದಲ್ಲಿ ಏಕಕಾಲಕ್ಕೆ ಈ 6 ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ. ಈ 6 ಏಜೆನ್ಸಿಗಳ ಮೇಲೆ ಇಮಿಗ್ರೇಶನ್ ಆಕ್ಟ್ 10, 24 ಅಡಿಯಲ್ಲಿ ಮತ್ತು ಐಪಿಸಿ ಸಕ್ಷನ್ 420 ಪ್ರಕಾರ ಕ್ರಿಮಿನಲ್ ಕೇಸ್ ರಿಜಿಸ್ಟರ್ ಮಾಡಿಕೊಳ್ಳಲಾಗಿದೆ. ಇನ್ನು ಏಕಕಾಲಕ್ಕೆ ಮಂಗಳೂರು ಪೂರ್ವ, ಉತ್ತರ ಮತ್ತು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಯ್ತು. ಇನ್ನು ಈ ಏಜೆನ್ಸಿಗಳಿಂದ ಅದೆಷ್ಟೋ ಜನರು ವಿದೇಶಕ್ಕೆ ಹೋಗಿ ಮೋಸ ಹೋಗಿರೋದು ಬಟಬಯಲಾಗಿದೆ. ಅಲ್ಲಿ ಉತ್ತಮ ಕೆಲಸದ ನಿರೀಕ್ಷೆಯಲ್ಲಿ ಹೋಗಿ ಕುರಿ ಕಾಯುವ ಕೆಲಸವನ್ನು ವರ್ಷಾನುಗಟ್ಟೆಲೆ ಮಾಡಿದವ್ರು ಇದ್ದಾರೆ. ಪಾಸ್ ಪೋರ್ಟ್ ಕಿತ್ತಿಟ್ಟುಕೊಂಡ ಕಂಪೆನಿಗಳ ಕೈಗೆ ಸಿಲುಕಿ ತವರಿಗೆ ವಾಪಾಸ್ ಅಗಲು ಪರದಾಡಿದ ಘಟನೆ ಬೆಳಕಿಗೆ ಬಂದಿದೆ.

ಒಟ್ಟಿನಲ್ಲಿ ಮಂಗಳೂರಿಗರು ವಿದೇಶಿ ಉದ್ಯೋಗಕ್ಕೆ ಮಾರು ಹೋಗಿ ಇಂತಹ ವಂಚನಾ ಜಾಲಕ್ಕೆ ಸಿಲುಕಬಾರದು ಹೋಗೋ ಮುನ್ನ ಏಜೆನ್ಸಿಗಳ ಬಗ್ಗೆ ಪೂರ್ವಾಪರ ವಿಚಾರಿಸಿ. ನಂತರ ವಿದೇಶಕ್ಕೆ ಹೋಗುವ ಬಗ್ಗೆ ಚಿಂತಿಸಲಿ ಎನ್ನವುದೇ ನಮ್ಮ ಆಶಯ….

 

Related posts

Leave a Reply

Your email address will not be published. Required fields are marked *