Header Ads
Header Ads
Breaking News

ಮಂಗಳೂರಿನಿಂದ ಕುಂದಾಪುರ ವರೆಗೆ ಹೊರಟ ದೊಡ್ಡ ಬಳ್ಳಾಪುರದ ಜನ ಜಾಗ್ರತಿ ಸೈಕಲ್ ಜಾಥ

ಮಂಗಳೂರಿನಿಂದ ಕುಂದಾಪುರ ವರೆಗೆ ಹೊರಟ ದೊಡ್ಡ ಬಳ್ಳಾಪುರದ ಜನ ಜಾಗ್ರತಿ ಸೈಕಲ್ ಜಾಥವು ಉಡುಪಿ ತಲುಪಿದಾಗ, ಜಾಥದ ಕಾರ್ಯಕರ್ತರನ್ನು ಉಡುಪಿಯ ಸಂಸ್ಕೃತ ಕಾಲೇಜಿನ ಆಶ್ರಯದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸ್ವಾಗತಿಸಿ ಗೌರವಿಸಲಾಯಿತು.

ತಾಲೂಕು ಬಳಕೆದಾರರ ಹಿತರಕ್ಷಣಾ ಸಂಘ ಟ್ರಸ್ಟ್(ರಿ) ದೊಡ್ಡಬಳ್ಳಾಪುರ, ಇದರ ಕಾರ್ಯಕರ್ತರು ಶುದ್ಧ ಆಹಾರ ಸೇವನೆ, ಆಹಾರ ಪೋಲು ಸಲ್ಲದು, ಆಹಾರ ಸೇವನೆ ಕ್ರಮ, ಮುಂತಾದ ಆಹಾರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುತ್ತ, 10 ನೇ ಹಂತದ ಜನ ಜಾಗ್ರತಿ ಸೈಕಲ್ ಜಾಥವು ಮಂಗಳೂರಿನಿಂದ ಪ್ರಾರಂಭಗೊಂಡು ಕುಂದಾಪುರದಲ್ಲಿ ಸಮಾಪನಗೊಳಿಸಲು ಸಂಕಲ್ಪಿಸಿದ್ದರು. ಸೈಕಲ್ ಜಾಥವು ಉಡುಪಿಗೆ ಬಂದಾಗ ಶ್ರೀ ಮನ್ಮಧ್ವ ಸಿದ್ಧಾಂತ ಪ್ರಭೋಧಿನಿ ಸಂಸ್ಕ್ರತ ಕಾಲೇಜಿನ ಆಶ್ರಯದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಜಾಥದ ಕಾರ್ಯಕರ್ತರಾದ ದೊಡ್ನಬಳ್ಳಾಪುರದ ಬದರಿನಾಥ್, ಕೆ.ಸಿ.ರಘು, ಚಿದಾನಂದ ಮೂರ್ತಿ, ಮೋಹನ್ ಕುಮಾರ್, ಪ್ರತಾಪ್ ಬಂಟ್ವಾಳ ಅವರನ್ನು ಶಾಲು ಹೊದಿಸಿ, ಹೂ, ಪುಸ್ತಕ ನೀಡುವ ಮೂಲಕವಾಗಿ ಗೌರವಿಸಲಾಯಿತು. ಸಂಸ್ಕ್ರತ ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಥದ ಉದ್ದೇಶಿತ ಸಂದೇಶವನ್ನು ಕಾರ್ಯಕರ್ತರು ನೀಡಿ, ಸಂದೇಶದ ಕರ ಪತ್ರಗಳನ್ನು ವಿತರಿಸಿದರು.
ಸ್ವಾಗತ ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಲತಾ, ಸಹ ಶಿಕ್ಷಕರಾದ ಅಶೋಕ ಹೆಗಡೆ, ದಿವಾಕರ್ ಐತಾಳ್, ಯು. ರಮೇಶ್, ಕಾಲೇಜು ಗ್ರಂಥಪಾಲಕ ಶ್ರೀಹರಿಕೃಷ್ಣ ರಾವ್, ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply