Header Ads
Breaking News

ಮಂಗಳೂರಿನಿಂದ ಮಾಲ್ದೀವ್ಸ್ ದೇಶಕ್ಕೆ ಸರಕು ರಫ್ತು ಆರಂಭ

ಮಂಗಳೂರು ಹಳೆ ಬಂದರಿನಿಂದ ಇದೇ ಮೊದಲ ಬಾರಿಗೆ ಮಾಲ್ದೀವ್ಸ್ ದೇಶಕ್ಕೆ ಸರಕು ರಫ್ತು ಆರಂಭವಾಗಿದೆ.ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ದ್ವೀಪ ಸಮೂಹ ದೇಶವಾದ ಮಾಲ್ದೀವ್ಸ್ ತರಕಾರಿ ಮತ್ತು ಆಹಾರಕ್ಕಾಗಿ ಇತರ ದೇಶಗಳನ್ನು ಅವಲಂಬಿಸಿದೆ. ಇದುವರೆಗೆ, ತಮಿಳುನಾಡು ರಾಜ್ಯದ ಕಾರವಳಿಯ ಸಣ್ಣ ಬಂದರುಗಳಿಂದ ಮಾಲ್ದೀವ್ಸ್ ಗೆ ಸರಕು ಸಾಗಾಟ ಆಗುತಿದ್ದು, ಇದೀಗ ಆ ಬಂದರುಗಳ ಪಟ್ಟಿಗೆ ಮಂಗಳೂರು ಕೂಡ ಸೇರ್ಪಡೆಯಾಗಿದೆ.ಹಳೆ ಮಂಗಳೂರು ಬಂದರಿನಿಂದ ಲಕ್ಷದ್ವೀಪ ಸಮೂಹಕ್ಕೆ ಸರಕು ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಮಾಲ್ದೀವ್ಸ್ ದೇಶಕ್ಕೆ ಇದೀಗ ಸರಕು ಸಾಗಾಟ ಆರಂಭವಾಗಿದೆ. ಹಳೆ ಮಂಗಳೂರು ಬಂದರಿನಿಂದ ಹೊರಟ ಚಿಕ್ಕ ಹಡಗು ಹಿಂದೂ ಮಹಾಸಾಗರದಲ್ಲಿ ಇರುವ ಮಾಲ್ಜೀವ್ಸ್ ದ್ವೀಪ ದೇಶ ತಲುಪಲು ನಾಲ್ಕು ದಿವಸಗಳು ಬೇಕಾಗುತ್ತವೆ.
ಮಂಗಳೂರು ಹಳೆ ಬಂದರಿಂದ ತರಕಾರಿ, ಹಣ್ಣು ಹಂಪಲು ಮಾತ್ರವಲ್ಲದೆ ಅಪಾರ ಪ್ರಮಾಣದ ಸೆಗಣಿ ಗೊಬ್ಬರ ರಫ್ತು ಮಾಡಲಾಗುತ್ತಿದೆ. 150 ಟನ್ ಸೆಗಣಿ ಗೊಬ್ಬರ, 50 ಟನ್ ತರಕಾರಿ ಮತ್ತು ಹಣ್ಣು ಹಂಪಲು ರಫ್ತು ಮಾಡಲು ಮಾಲ್ದೀವ್ಸ್ ದೇಶದಿಂದ ಬೇಡಿಕೆ ಬಂದಿದ್ದು, ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಸರಕು ಸಾಗಾಟ ಮಾಡಲಾಗುತ್ತಿದೆ ಎಂದು ಸರಕು ಸಾಗಾದ ಗುತ್ತಿಗೆ ವಹಿಸಿಕೊಂಡಿರುವ ಚರಣದಾಸ್ ಕರ್ಕೇರ ಅವರು ತಿಳಿಸಿದರು.

Related posts

Leave a Reply

Your email address will not be published. Required fields are marked *