Breaking News

ಮಂಗಳೂರಿನಿಂದ ಮೊದಲ ಹಜ್ ವಿಮಾನ ಆರಂಭ – ಜುಲೈ 24, 25, 26 ರಂದು ವಿಮಾನ ಹಾರಾಟ

 

ಕರ್ನಾಟಕ ಪವಿತ್ರ ಹಜ್ ಯಾತ್ರೆ ತೆರಳುವವರ ಮೊದಲ ತಂಡವು ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದು, ಜುಲೈ 24, 25, 26 ರಂದು ವಿಮಾನ ಹಾರಾಟ ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೊಳಿ ಹೇಳಿದರು


ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಜುಲೈ 24 ರಂದು ಅಪರಾಹ್ನ 1.30 ಕ್ಕೆ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಯಾತ್ರಾ ಪ್ರಕ್ರಿಯೆಗಳು ಆರಂಭಗೊಳ್ಳಲಿದ್ದು, ಸಂಜೆ 4.15 ಕ್ಕೆ ಮೊದಲ ವಿಮಾನ ನಿರ್ಗಮಿಸಲಿದೆ. ಅಂದು ಪೂರ್ವಹ್ನ 11 ಗಂಟೆಗೆ ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಹಜ್ ನಿರ್ವಹಣ ಸಮಿತಿಯ ಕಾರ್ಯದರ್ಶಿ ಎಸ್.ಎಂ. ರಶೀದ್ ಹಾಜಿ, ಸಿ ಮೊಹಮ್ಮದ್ ಹಾಜಿ, ಹನೀಫ್ ಹಾಜಿ ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply