Header Ads
Header Ads
Breaking News

ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆ ವತಿಯಿಂದ ಇಂಟರ್‌ನ್ಯಾಷನಲ್ ಚೈಲ್ಡ್‌ವುಡ್ ಕ್ಯಾನ್ಸರ್ ಡೇ ಕಾರ್ಯಕ್ರಮ

ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆ ವತಿಯಿಂದ ಇಂಟರ್‌ನ್ಯಾಶನಲ್ ಚೈಲ್ಡ್‌ವುಡ್ ಕ್ಯಾನ್ಸರ್ ಡೇ ಕಾರ್ಯಕ್ರಮವನ್ನು ಆಸ್ಪತ್ರೆಯ ಸಂಜಿವಿನಿ ಸಭಾಂಗಣದಲ್ಲಿ ಆಚರಿಸಲಾಯಿತು.

 ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಂಜಿವಿನಿ ಸಭಾಂಗಣದಲ್ಲಿ ಇಂಟರ್‌ನ್ಯಾಶನಲ್ ಚೈಲ್ಡ್‌ವುಡ್ ಕ್ಯಾನ್ಸರ್ ಡೇ ಪ್ರಯುಕ್ತ ನೋ ಪೆಯಿನ್, ನೋ ಲಾಸ್ ಎಂಬ ಘೋಷ ವ್ಯಾಕದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಉದ್ಘಾಟನೆಯನ್ನ ಸಾಮಾಜಿಕ ಕಾಯಕರ್ತೆ ಹಾಗೂ ಆರ್.ಜೆ ರಶ್ಮಿ ಅವರು ನೆರೆವೇರಿಸಿದ್ರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ನಂಬಿಕೆ, ಮನಸ್ಸು, ತ್ಮಾಳೆ ಹೊಂದಿರಬೇಕು.ಆಗ ಮಾತ್ರ ಯಾವುದೇ ಸಮಸ್ಯೆಯನ್ನ ಹೋಗಲಾಡಿಸಲು ಸಾಧ್ಯವಿದೆ. ಇದನ್ನ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ಕೆಎಂಸಿ ಆಸ್ಪತ್ರೆಯ ಎಸೋಸಿಯೇಟ್ ಡೀನ್ ಡಾ|ನೂತನ್ ಕಾಮತ್ ಮಾತನಾಡಿ, ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬಗ್ಗೆ ಇನ್ನಷ್ಟ ಜಾಗೃತಿ ಮೂಡಿಸಬೇಕಾಗಿದೆ. ಆ ಮೂಲಕ ಮಕ್ಕಳರಲ್ಲಿ ಕಂಡು ಬರುವ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|ವೇಣುಗೋಪಾಲ್ ವಹಿಸಿದ್ರು. ಮುಖ್ಯ ಅತಿಥಿಗಳನ್ನು ಕೆಎಂಸಿ ಆಸ್ಪತ್ರೆಯ ಮಕ್ಕಳ ಕಾನ್ಸರ್ ತಜ್ಞರಾದ ಡಾ|ಹರ್ಷಪ್ರಸಾದ್ ಸ್ವಾಗತಿಸಿದ್ರು. ಡಾ| ಶ್ರಿಶಾ ಅವರು ಧನ್ಯವಾದವಿತ್ತರು.

Related posts

Leave a Reply

Your email address will not be published. Required fields are marked *