Header Ads
Header Ads
Breaking News

ಮಂಗಳೂರಿನ ಅಮೃತ ವಿದ್ಯಾಲಯದಲ್ಲಿ ಯೋಗಾ ದಿನಾಚರಣೆ

ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಮತ್ತು ಯೋಗಶಿಕ್ಷಕಿ ದೇವಿಕಾ ಪುರುಷೋತ್ತಮ ಅಕ್ಯುಪ್ರೆಶರ್ ತಜ್ಞ ಜನಾರ್ದನ ಭಾಗವಹಿಸಿದ್ದರು.ಇದೇ ವೇಳೆ ಮಾತನಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಯೋಗವನ್ನು ಪ್ರತಿಯೊಬ್ಬರು ಮಾಡಬೇಕು. ಸುಲಭವಾಗಿ ಅನಾಸಯವಾಗಿ ದೊರಕುವ ಯೋಗವನ್ನು ಅನುಷ್ಠಾನ ಮಾಡುವುದರಿಂದ ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು. ಆನಂತರ ಮಾತನಾಡಿದ ಯೋಗ ಶಿಕ್ಷಕಕಿ ದೇವಿಕಾ ಪುರುಷೋತ್ತಮ ಅವರು, ವಿದ್ಯಾರ್ಥಿಗಳು ನಿಯಮಿತವಾಗಿ ಯೋಗವನನು ಅಭ್ಯಾಸ ಮಾಡುವುದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದರು.

 

ಜನಾರ್ದನ ಚೈಪೆ ಅವರು ಆಕ್ಯುಪ್ರೆಶರ್ ಚಿಕಿತ್ಸೆಯ ಪ್ರತ್ಯಾಕ್ಷಿಕೆ ನಡೆಸಿಕೊಟ್ಟರು. ಔಷಧೀಯ ನೆರವಿಲ್ಲದೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಕೆಲವು ಚಿಕಿತ್ಸೆಗಳನ್ನು ಅವರು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶ್ರಮದ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ವಹಿಸಿ ಮಾತನಾಡಿ, ಆಶ್ರಮದ ಸುತ್ತಮುತ್ತಲ ನಿವಾಸಿಗಳ ಯೋಗಕ್ಷೇಮಕ್ಕಾಗಿ ಮುಂದೆಯೂ ಯೋಗ ಶಿಬಿರ ನಡೆಸುವ ಉದ್ದೇಶ ಇದೆ ಎಂದು ಹೇಳಿದರು.ಇನ್ನೂ ಜೂನ್ ೬ರಿಂದ ಹದಿನೈದು ದಿನಗಳ ಕಾಲ ಜರುಗಿದ ಉಚಿತ ಯೋಗ ಶಿಬಿರ್ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶಿಬಿರಾರ್ಥಿಗಳ ಪರವಾಗಿ ಇಬ್ಬರು ಶಿಬಿರಾರ್ಥಿಗಳು ಭಾಗವಹಿಸಿದ್ದರು.ಈ ಸಂದರ್ಭ ಸೇವಾ ಸಮಿತಿಯ ಉಪಾಧ್ಯಕ್ಷರಾದ ಡಾ. ವಸಂತ ಕುಮಾರ್ ಪೆರ್ಲ, ಪ್ರಾಂಶುಪಾಲ ಆರ್.ಸಿ ಭಟ್, ಉಪ ಪ್ರಾಂಶುಪಾಲೆ ಅನುಪಮಾ ರಾವ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply