Header Ads
Header Ads
Breaking News

ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಯಕ್ಷೋತ್ಸವ ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್‌ಗೆ ಪ್ರಶಸ್ತಿ

ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಆಶ್ರಯದಲ್ಲಿ ನಡೆದ ಯಕ್ಷೋತ್ಸವ ೨೦೧೮ ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಸುದರ್ಶನ ವಿಜಯ’ ಎಂಬ ಪ್ರಸಂಗವು ಪ್ರಥಮ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಸತತ ಮೂರು ವರ್ಷಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.ಪ್ರಶಸ್ತಿಯು ಪರ್ಯಾಯ ಫಲಕ, 5 ಸಾವಿರ ರೂಪಾಯಿ ನಗದು ಒಳಗೊಂಡಿದೆ.
ಆಳ್ವಾಸ್ ವಿದ್ಯಾರ್ಥಿಗಳಾದ ಶಿವರಾಜ ಬಜಕೂಡ್ಲು ಅತ್ಯುತ್ತಮ ಪುಂಡುವೇಷ, ಪ್ರತೀಕ್ಷಾ ಅತ್ಯುತ್ತಮ ಹಾಸ್ಯ ಪ್ರಶಸ್ತಿಯನ್ನು ಪಡೆದರು. ಶೇಖರ್ ಶೆಟ್ಟಿಗಾರ್ ಅರ್ಥ ವಿನ್ಯಾಸ ,ಮಾರ್ಗದರ್ಶನದಲ್ಲಿ ಸಹಕರಿಸಿದರೆ ಪ್ರಸಾದ್ ಚೇರ್ಕಾಡಿ ನಿರ್ದೇಶಿಸಿದರು.ಯಕ್ಷೆತ್ಸವದಲ್ಲಿ 8 ಕಾಲೇಜಿನ ತಂಡಗಳು ಭಾಗವಹಿಸಿದ್ದು, ಗೋವಿಂದದಾಸ್ ಕಾಲೇಜು ಸುರತ್ಕಲ್ ದ್ವಿತೀಯ, ಎಸ್‌ಡಿಎಂ ಕಾಲೇಜು ಉಜಿರೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

Related posts