Header Ads
Header Ads
Breaking News

ಮಂಗಳೂರಿನ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ತುಳು ಪರ್ಬ -2019 ಕಾರ್ಯಕ್ರಮ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಎಸ್‌ಡಿಎಂ ಕಾನೂನು ಕಾಲೇಜು ವತಿಯಿಂದ ತುಳು ಪರ್ಬ -2019ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆದ ತುಳು ಪರ್ಬ ಕಾರ್ಯಕ್ರಮವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತುಳು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಕೈಜೋಡಿಸಬೇಕು. ಈಮೂಲಕ ತುಳು ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಮಾಡಿದ ವಾಗ್ಮಿ ದಯಾನಂದ್ ಕತ್ತಲ್ ಸಾರ್, ವಕೀಲರಾದ ರಾಘವೇಂದ್ರ , ರಾಜೇಶ್ ಆಳ್ವ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯ್ತು. ಈ ವೇಳೆ ವಕೀಲರಾದ ಪಿ.ಪಿ.ಹೆಗ್ಡೆ, ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯರಾದ ಡಾ|ತಾರನಾಥ್ , ಉಪನ್ಯಾಸಕ ಪುಪ್ಪರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.

Related posts

Leave a Reply

Your email address will not be published. Required fields are marked *