Header Ads
Header Ads
Header Ads
Breaking News

ಮಂಗಳೂರಿನ ಐಟಿ ಕಚೇರಿಗೆ ದಾಳಿ ಪ್ರಕರಣ ಮನಪಾ ಸಾಮನ್ಯ ಸಭೆಯಲ್ಲಿ ಗದ್ದಲ ಪಾಲಿಕೆ ಸದಸ್ಯ ಕ್ಷಮೆಯಾಚಿಸಬೇಕೆಂದು ವಿಪಕ್ಷ ಪಟ್ಟು

 

 

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ಐಟಿ ಕಚೇರಿಯ ಮೇಲೆ ಧಾಳಿ ನಡೆಸಿದ ಪಾಲಿಕೆ ಸದಸ್ಯ ಕ್ಷಮೆಯಾಚಿಸಬೇಕೆಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದರು. ಈ ವಿಚಾರಕ್ಕೆ ಸಂಬಂಧಿಸಿ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
 ಇತ್ತೀಚೆಗೆಷ್ಟೆ ಮಂಗಳೂರಿನ ಐಟಿ ಕಚೇರಿಗೆ ಧಾಳಿ ನಡೆಸಿದ ಪಾಲಿಕೆ ಸದಸ್ಯ ವಿನಯ್ ರಾಜ್ ವಿರುದ್ಧ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಆಕ್ರೋಶಕ್ಕೆ ಕಾರಣವಾಯ್ತು, ಕಾನೂನು ಪಂಡಿತರೇ ಕಾನೂನುನ್ನು ಮುರಿದರೇ ಹೇಗೆ ಎಂದು ವಿಪಕ್ಷ ಸದಸ್ಯರು ವಿನಯ್ ರಾಜ್ ಛೇಡಿಸಿದರು. ಈ ನಡುವೇ ಆಡಳಿತ ಪಕ್ಷದ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರು, ನಿಮ್ಮ ಸಂಸದರೇ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ವಿರೋಧ ಸದಸ್ಯರನ್ನ ಆಡಳಿತ ಸದಸ್ಯರು ತಿವಿದರು.
 ಇದರಿಂದಾಗಿ ಸಭೆಯಲ್ಲಿ ಕೆಲ ಹೊತ್ತು ಗದ್ದಲ ನಿರ್ಮಾಣವಾಯ್ತು, ಈ ನಡುವೆ ವಿಪಕ್ಷ ಸದಸ್ಯರು ಮೇಯರ್ ಪೀಠದ ಮುಂದೆ ಧರಣಿ ನಡೆಸಿದ್ರು. ಈ ಕೂಡಲೇ ಸದಸ್ಯ ಕ್ಷಮೆಯಾಚಿಸಬೇಕೆಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದರು, ಮೇಯರ್ ಕವಿತಾ ಸನಿಲ್ ವಿಪಕ್ಷ ಸದಸ್ಯರನ್ನು ಸಮಾಧಾನ ಮಾಡಲು ಯತ್ನಿಸಿದ್ರು. ನಿಮ್ಮ ಆಸನಕ್ಕೆ ಹೋಗಿ ಕುಳಿತುಕೊಳ್ಳಲಿ ಎಂದು ಮನವಿ ಮಾಡಿಕೊಂಡರು.

ಈ ನಡುವೆ ಸದಸ್ಯ ವಿನಯ್ ರಾಜ್ ಮಾತನಾಡಲು ಯತ್ನಿಸಿದಾಗ , ಮತ್ತೆ ಸಾಮಾನ್ಯ ಸಭೆಯಲ್ಲಿ ಗದ್ಧಲ ನಿರ್ಮಾಣವಾಯ್ತು, ಸಭೆಯಲ್ಲಿ ಸ್ಪಷ್ಟನೆಯನ್ನು ನೀಡಲು ಮುಂದಾದಗ ವಿನಯ್ ರಾಜ್ ಅವರನ್ನು ಆಡಳಿತ ಪಕ್ಷದ ಸದಸ್ಯರೇ ಕುಳಿತುಕೊಳ್ಳಲಿ ಎಂದು ಹೇಳಿದ ಪ್ರಸಂಗ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಗೆ ಬಯಲು ಮಲ ವಿಸರ್ಜನೆ ಮುಕ್ತನಗರ ಪ್ರಶಸ್ತಿಯನ್ನು ಲಭಿಸಿರುದಕ್ಕೆ ಮೇಯರ್ ಕವಿತಾ ಸನಿಲ್ ಸಂತಸ ವ್ಯಕ್ತಪಡಿಸಿದ್ರು. ಪಾಲಿಕೆಯ ೬೦ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

Related posts

Leave a Reply