Header Ads
Header Ads
Breaking News

ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ನಂದಿನಿ ಔಟ್‌ಲೆಟ್ ಉದ್ಘಾಟನೆ : ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ

ಮಂಗಳೂರಿನ ಜನತೆಗೆ ಕೆಎಂಎಫ್ ವತಿಯಿಂದ ಸಿಹಿ ಸುದ್ದಿ, ಇನ್ನೂ 20 ದಿನಗಳ ಕಾಲ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ನಂದಿನಿಯ ಸಿಹಿ ಉತ್ಪನ್ನಗಳಿಗೆ ಶೇಕಡಾ 10ರಷ್ಟು ರಿಯಾಯಿತಿಯೂ ಇದೆ. ಇಂದು ಮಂಗಳೂರಿನ ಕಾರಸ್ಟ್ರೀಟ್‌ನಲ್ಲಿ ನಂದಿನಿ ಉತ್ಪನ್ನಗಳ ಔಟ್‌ಲೆಟ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ನಂದಿನಿ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಎರಡನೇ ಅತಿ ದೊಡ್ಡ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅಲ್ಲದೆ ಎಲ್ಲರ ಮನೆಮಾತಾಗಿರುವ ಉತ್ಪನ್ನವೂ ಆಗಿದೆ. ಇದೀಗ ಪ್ರತಿಯೊಬ್ಬರಿಗೂ ನಂದಿನಿಯ ಸಿಹಿ ಉತ್ಪನ್ನಗಳು ಸಿಗಲಿ ಎನ್ನುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವತಿಯಿಂದ ನಂದಿನಿ ಸಿಹಿ ಉತ್ಸವವನ್ನು ಹಮ್ಮಿಕೊಂಡಿದ್ದಾರೆ.ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ನಂದಿನಿ ಸಿಹಿ ಉತ್ಪನ್ನಗಳ ನಂದಿನಿ ಸಿಹಿ ಉತ್ಸವದ ಔಟ್‌ಲೆಟ್‌ನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಉಪಾಧ್ಯಕ್ಷರಾದ ಸುಚರಿತ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಆನಂತರ ಮಾತನಾಡಿದ ಅವರು, ನಂದಿನಿ ವತಿಯಿಂದ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಗ್ರಾಹಕರು ಪಡೆದುಕೊಳ್ಳಿ ಎಂದು ಹೇಳಿದರು.ಆನಂತರ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ವಿ. ಸತ್ಯನಾರಾಯಣ ಅವರು ಮಾತನಾಡಿ, ನಂದಿನಿ ಸಿಹಿ ಉತ್ಸವವು ಗ್ರಾಹಕರಿಗೆ ನೆಚ್ಚಿನ ಉಡುಗೊರೆ. ಪಾರಂಪರಿಕ ಸಿಹಿ ಉತ್ಪನ್ನಗಳು ಹೆಚ್ಚಿದ್ದು, ನಂದಿನಿ ಉತ್ಪನ್ನಗಳನ್ನು ಹೆಚ್ಚು ಜನರು ಸವಿಯಬೇಕು ಎನ್ನುವ ಉದ್ದೇಶದಿಂದ ಶೇಕಡಾ 10ರಷ್ಟು ರಿಯಾಯಿತಿಯಲ್ಲಿ ಗ್ರಾಹಕರಿಗೆ ನೀಡುತ್ತಿದ್ದೇವೆ. ಇಂದಿನಿಂದ 20 ದಿನಗಳವರೆಗೆ ನಂದಿನಿ ಉತ್ಪನ್ನಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಆನಂತರ ಮಂಗಳೂರು ಕಾರ್ಪೊರೇಟರ್ ಪೂರ್ಣಿಮಾ ಅವರು ಮಾತನಾಡಿ, ನಂದಿನಿ ವತಿಯಿಂದ ಗ್ರಾಹಕರಿಗೆ ಸಿಹಿ ಸುದ್ದಿ, ಪ್ರತಿಯೊಬ್ಬರು ನಂದಿನ ಸಿಹಿ ಉತ್ಪನ್ನಗಳನ್ನು ಸವಿಯಿರಿ ಎಂದು ಹೇಳಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ನಿರ್ದೇಶಕರಾದ ಡಾ. ಕೃಷ್ಣ ಭಟ್, ನರಹರಿ ಪ್ರಭು, ವಾರ್ತಾಧಿಕಾರಿ ಖಾದರ್ ಷಾ, ಮಾರುಕಟ್ಟೆ ವ್ಯವಸ್ಥಾಪಕರಾದ ಜಯದೇವಪ್ಪ, ಮಾರುಕಟ್ಟೆ ಅಧಿಕಾರಿಗಳಾದ ಎಂ. ರವಿ, ಚೇತನ್, ಕಾರ್‌ಸ್ಟ್ರೀಟ್ ಪಾರ್ಲರ್‌ನ ನಿರ್ವಹಣಾದಾರರಾದ ಸಂತೋಷ್ ನಾಯಕ್ ಉಪಸ್ಥಿತರಿದ್ದರು.

Related posts

Leave a Reply