Header Ads
Header Ads
Breaking News

ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಡ್ರೀಮ್ ಝೋನ್ ಸೂಲ್ಕ್ ಆಫ್ ಕ್ರಿಯೆಟಿವ್ ಸ್ಟಡೀಸ್‌ನ ಗ್ರಾಜ್ಯುವೇಷನ್ ಡೇ

 ಮಂಗಳೂರು ಹಾಗೂ ಉಡುಪಿಯಲ್ಲಿ ಹೆಸ್ರು ಪಡೆದಿರುವ ಡ್ರೀಮ್ ಝೋನ್ ಸೂಲ್ಕ್ ಆಫ್ ಕ್ರಿಯೆಟಿವ್ ಸ್ಟಡೀಸ್‌ನ ಗ್ರಾಜ್ಯುವೇಷನ್ ಡೇ ಅದ್ಧೂರಿ ಮಂಗಳೂರಲ್ಲಿ ನಡೆಯಿತು. ಈ ವೇಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತಷ್ಟು ಮನರಂಜಿಸಿತ್ತು.

ಮಂಗಳೂರು ಹಾಗೂ ಉಡುಪಿಯಲ್ಲಿ ತನ್ನ ವಿದ್ಯಾ ಸಂಸ್ಥೆಯನ್ನ ಆರಂಭಿಸಿರುವ ಡ್ರೀಂ ಝೋನ್ ನ ಹಲವಾರು ಮಂದಿ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಕ್ಕೆ ದಾರಿದೀಪವಾಗುತ್ತಿದೆ. ಇದೀಗ ಮಂಗಳೂರಿನ ಕುದ್ಮಲ್ ರಾವ್ ರಂಗರಾವ್ ಪುರಭವನದಲ್ಲಿ ಗ್ರಾಜ್ಯುವೇಷನ್ ಡೇ ಅದ್ಧೂರಿಯಾಗಿ ಆಚರಿಸಲಾಯ್ತು, ಇನ್ನು ಕಾರ್ಯಕ್ರಮವನ್ನ ಕಾರ್ ಸ್ಟ್ರೀಟ್ ಪ್ರಥಮ ದರ್ಜೆ ಕಾಲೇಜಿನ ಪ್ರಾರ್ಚಾಯರಾದ ಪ್ರೋ.ರಾಜಶೇಖರ್ ಹೆಬ್ಬಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಶಿಕ್ಷಣ ಪದ್ಧತಿ ಬದಲಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅದಕ್ಕೆ ಹೊಂದಿಕೊಳ್ಳುವ ದಿನಾ ಬರಬಹುದು ಅಂತಾ ಹೇಳಿದರು.

ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಿಸೈನರ್ ಮಹಮ್ಮದ್ ರಫೀಕ್ ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ಅವರು, ಉತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಆವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನ ಡ್ರೀಂ ಝೋನ್ ನ ರಾಷ್ಟ್ರೀಯ ಮುಖ್ಯಸ್ಥರಾದ ಅರುಣ್ ಪ್ರಶಾಂತ ವಹಿಸಿದ್ದರು. ಇನ್ನು ಡ್ರೀಂ ಝೋನ್ ನ ಸೆಂಟರ್ ಮುಖ್ಯಸ್ಥರಾದ ವಿನೋದ್ ಕುಮಾರ್ ಅವರು ಗಣ್ಯರನ್ನ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡ್ಯಾನ್ಸ್, ಭರತ್ಯನಾಟ್ಯ, ಸಂಗೀತ, ಅಂತರಾಷ್ಟ್ರೀಯ ಮಟ್ಟದ ಯೋಗಪಟುಗಳಿಂದ ಯೋಗಾಭ್ಯಾಸ, ಹಾಗೂ ಪ್ಯಾಶನ್ ಡಿಸೈನರ್ ವಿದ್ಯಾರ್ಥಿಗಳಿಂದ ಪ್ಯಾಶನ್ ಶೊ ಮತ್ತಷ್ಟು ರಂಜಿಸಿತ್ತು.

Related posts

Leave a Reply